ಬೆಳ್ತಂಗಡಿ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಇದರ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ: ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸಂಸ್ಥೆಯ ಅದ್ಯಕ್ಷರು ಹಾಗೂ ಪ್ರಾಂಶುಪಾಲರಾದ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ದಾರುಸ್ಸಲಾಂ ಕ್ಯಾಂಪಸ್ ನಲ್ಲಿ ನಡೆಯಿತು.

ಮೂಸಾ ದಾರಿಮಿ ಕಕ್ಕಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಿರಾಜ್ ಮಾಸ್ಟರ್ ಲೆಕ್ಕ ಪತ್ರ ವಾಚಿಸಿದರು. ನಂತರ 2023-24 ನೇ ಸಾಲಿನ ನೂತನ ಸಮಿತಿಯನ್ನು ರಚಿಸಿಲಾಯಿತು.

ಗೌರವಧ್ಯಕ್ಷರಾಗಿ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್, ಅಡ್ವೈಸರಿ ಬೋರ್ಡ್ ರಾಗಿ ಶೈಖುನ ಎ ವಿ ಉಸ್ತಾದ್, ಶೈಖುನ ಬಂಬ್ರಾಣ ಉಸ್ತಾದ್, ಶೈಖುನ ಕೆ ಎಂ ಉಸ್ಮಾನುಲ್ ಫೈಝಿ ತೋಡಾರ್, ಶರೀಫ್ ಫೈಝಿ ಕಡಬ, ಮೂಸ ದಾರಿಮಿ ಕಕ್ಕಿಂಜೆ, ಬಿ ಎಚ್ ಮುಹಮ್ಮದ್ ಹಾಜಿ ಬೆಳ್ತಂಗಡಿ, ಹಸನಬ್ಬ ಚಾರ್ಮಾಡಿ ಹಾಗು ಸಿ ಕೆ ಇಬ್ರಾಹಿಂ ಮೂಡಿಗೆರೆ ರವರನ್ನು ಆಯ್ಕೆ ಮಾಡಲಾಯಿತು. ಉಲಮಾ ಸಮಿತಿಯ ಸದಸ್ಯರಾಗಿ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಆತೂರು, ಇರ್ಷಾದ್ ದಾರಿಮಿ ಮಿತ್ತಬೈಲ್, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಅಬ್ದುಲ್ ಸಲಾಂ ಫೈಝಿ ಉಪ್ಪಿನಂಗಡಿ ಹಾಗು ಹನೀಫ್ ಫೈಝಿ ಬೆಳ್ತಂಗಡಿ ರವರನ್ನು ಆರಿಸಲಾಯಿತು.

ನೂತನ ಸಮಿತಿಯ ಅದ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಕಾರ್ಯದರ್ಶಿಯಾಗಿ ಅಹ್ಮದ್ ಹುಸೈನ್ ಮೂಡುಬಿದ್ರೆ, ಕೋಶಾಧಿಕಾರಿಯಾಗಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ವುಮನ್ಸ್ ಕಾಲೇಜು ಚೇರ್ಮಾನಾಗಿ ಅಬ್ದುಲ್ ನಝೀರ್ ಬಿ.ಎ ಬೆಳ್ತಂಗಡಿ ಹಾಗು ಕನ್ವೀನರಾಗಿ ಬಿ.ಎಚ್ ರಝಾಕ್ ಬೆಳ್ತಂಗಡಿ ರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಸಯ್ಯದ್ ಅಕ್ರಮ್ ಅಲಿ ತಂಙಳ್, ಲತೀಫ್ ಗುರುಪುರ, ಹಫೀಜ್ ಬೆಂಗಳೂರು, ಉಮರ್ ಹಾಜಿ ಉಪ್ಪಿನಂಗಡಿ, ಯು ಕೆ ಉಮರ್ ಪಡ್ದoದಡ್ಕ, ಯು ಕೆ ಮೋನು ಹಾಜಿ ಕಕ್ಕಿoಜೆ ಮತ್ತು ಶರೀಫ್ ಮೂಸ ಕುದ್ದುಪದವು, ವರ್ಕಿಂಗ್ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ಕಣ್ಣೂರ್, ಕೋರ್ಡಿನೇಟರ್ ರಾಗಿ ಅಬ್ದುಲ್ ಅಝೀಝ್ ಕಿಡ್ಸ್ ಆತೂರು, ಅಸಿಸ್ಟೆಂಟ್ ಕೋರ್ಡಿನೇಟರ್ ರಾಗಿ ಇಸಾಕ್ ಕೌಸರಿ ಹಾಗು ಸಿನಾನ್ ಹುದವಿ, ಜೊತೆ ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ತಂಙಳ್, ಹಾರಿಸ್ ಐ ಜೆ ಬೆಳ್ತಂಗಡಿ, ಹಕೀo ಬಂಗೇರಕಟ್ಟೆ, ಅಬ್ದುಲ್ ಅಝೀಝ್ ಮಲಿಕ್, ಯೂಸುಫ್ ಪೆದಮಾಲೆ ಹಾಗು ಸಿದ್ದಿಕ್ ಬ್ರೈಟ್ ಚಾರ್ಮಾಡಿ, ಆಡಿಟರಾಗಿ ಶಾಫಿ ಪಡ್ದoದಡ್ಕ, ಮೀಡಿಯಾ ಉಸ್ತುವಾರಿಯಾಗಿ ಸಿರಾಜ್ ಚಿಲಿಂಬಿ, ನಿಯಾಜ್ ಮುಸ್ಲಿಯಾರ್ ಹಾಗು ಮುನೀರ್ ಆತೂರು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯದ್ ತ್ವಾಹ ಜಿಫ್ರಿ ತಂಙಳ, ಆದo ದಾರಿಮಿ, ಅಬ್ದುಲ್ ರಹಮಾನ್ ವಿ ಆರ್, ಹನೀಫ್ ಮಜಲ್, ಹನೀಫ್ ದೂಮಾಲಿಕೆ, ಶಾಕಿರ್ ರಾಜಧಾನಿ, ಮುಸ್ತಾಫಾ ಕುದ್ರಡ್ಕ ಮತ್ತು ಲತೀಫ್ ಪಂಡವರಕಲ್ಲು, ವಲಯ ಒರ್ಗನೈಝಿನ್ಗ್ ಕಾರ್ಯದರ್ಶಿಗಳಾಗಿ ರಿಯಾಜ್ ಫೈಝಿ, ಅಶ್ರಫ್ ಹಾಜಿ ಸಿಟಿ, ಹಾರೂನ್ ದೇರಳಕಟ್ಟೆ, ಇಬ್ರಾಹಿಂ ಬಾತೀಶ ಪುತ್ತೂರು, ಅಶ್ರಫ್ ಮಾರೋಡಿ, ಶಿಹಾಬ್ ಆಜ್ಹಾರಿ, ಮೊಹಮ್ಮದ್ ಸಾಗರ್ ಹಾಗು ಮೊಯಿದಿನ್ ಉಡುಪಿ ರವರನ್ನು ಆಯ್ಕೆ ಮಾಡಲಾಯಿತು.

ಪ್ರಸ್ತುತ ಸಭೆಯಲ್ಲಿ ಆಗಸ್ಟ್ 12 ರಿಂದ ನವೆಂಬರ್ 12 ವರೆಗೆ ನಡೆಯುವ “ಇತ್ತಿಸಾಲ್ 2” ಇದರ ಎರಡನೇ ಹಂತದ ಕ್ಯಾಂಪೇನ್ ಗೆ ಚಾಲನೆ ನೀಡಲಾಯಿತು.7ನೇ ವಾರ್ಷಿಕೋತ್ಸವ ಹಾಗೂ ಶೈಖುನಾ ಶಂಸುಲ್ ಉಲಮಾ (ಖ.ಸಿ) ಉರೂಸ್ ಮುಬಾರಕ್ ಪೋಸ್ಟರ್ ಬಿಡುಗಡೆಯು ಈ ಸಂದರ್ಭದಲ್ಲಿ ಮಾಡಲಾಯಿತು.

ಬಶೀರ್ ದಾರಿಮಿ ಸ್ವಾಗತಿಸಿದರು ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಹ್ಮದ್ ಹುಸೈನ್ ವಂದಿಸಿದರು.

p>

LEAVE A REPLY

Please enter your comment!
Please enter your name here