

ಬಂಟ್ವಾಳ: ಆ.19ರಂದು ಶ್ರೀ ಮದವೂರ ವಿಘ್ನೇಶಕಲಾ ಸಂಘ ಗೇರುಕಟ್ಟೆ, ಬೆಳ್ತಂಗಡಿ ಈ ಸಂಘದ ಸದಸ್ಯರಿಂದ ಇಂದ್ರಜಿತು ಕಾಳಗ ಎಂಬ ಯಕ್ಷಗಾನ ತಾಳಮದ್ದಳೆಯು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಭಾಗವತರಾಗಿ ಸಚಿನ್ ಕುದುರೆ ಪಾಡಿ, ಮದ್ದಳೆಯಲ್ಲಿ ಜಗದೀಶ್ ಚೆಂಡೆಯಲ್ಲಿ ಮಧೂರು ರಾಮ ಪ್ರಕಾಶ ಕಲ್ಲೂರಾಯ ಭಾಗವಹಿಸಿದ್ದರು.ಶ್ರೀ ರಾಮನಾಗಿ ಜಯಂತಿ ಸುರೇಶ ಹೆಬ್ಬಾರ್, ಲಕ್ಷ್ಮಣನಾಗಿ ರಾಮಕೃಷ್ಣ ಭಟ್ ನಿನ್ನಿಕಲ್ಲು, ಮಾಯಾ ಸೀತೆಯಾಗಿ ಪ.ರಾಮಕೃಷ್ಣ ಶಾಸ್ತ್ರಿ, ಹನುಮಂತನಾಗಿ ಬಾಸಮೆ ನಾರಾಯಣ ಭಟ್, ಇಂದ್ರಜಿತು ಆಗಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ರಾವಣ ಮತ್ತು ವಿಭೀಷಣನಾಗಿ ಸುವರ್ಣ ಕುಮಾರಿ ಕಲ್ಲೂರಾಯ ಪಾತ್ರವಹಿಸಿದ್ದರು.
ಶ್ರೀ ನಾಗೇಂದ್ರಪೈ ಮತ್ತು ಸೀತಾರಾಮ ಸಹಕರಿಸಿದರು.ಮಧೂರು ಮೋಹನ ಕಲ್ಲುರಾಯ ನಿರ್ದೇಶಿಸಿದರು.