ಬೆಳ್ತಂಗಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯದಸೀರೋ ಮಲಬಾರ್ ಯೂತ್ ಮೂವ್ಮೆಂಟ್ ನೆಲ್ಯಾಡಿ ಅಲ್ಫೋನ್ಸ ಪುಣ್ಯ ಕ್ಷೇತ್ರ ಇದರ ವತಿಯಿಂದ ಆಗಸ್ಟ್ 19 ಮತ್ತು ಇಪ್ಪತ್ತು ದಿನಾಂಕ ಗಳಲ್ಲಿ ನಡೆದ ಅಲ್ಫಾ ಟ್ರೋಫಿ 2023 ಹೊನಲು ಬೆಳಕಿನ ಶಟಲ್ ಪಂದ್ಯಾಟ ಸುಮಾರು ಐವತ್ತ್ತೊಂದು ತಂಡಗಳು ಬಾಗವಹಿಸಿ ಯಶಸ್ವಿಯಾಗಿ ನಡೆಸಲಾಯಿತು.
ಕ್ರೀಡೆ ನಿರಂತರ ವಾಗಿ ಜೀವಕ್ಕೆ ಮತ್ತು ಜೀವನಕ್ಕೆ ಸ್ಫೂರ್ತಿ ಎಂದು ಕ್ರೀಡೆ ಯಿಂದ ವ್ಯಕ್ತಿತ್ವ ಮತ್ತು ಸಾಮಾಜಿಕರಣ ಎರಡನ್ನು ಸಾಧಿಸಲಾಗದು ಎಂದು ತಾನು ಕ್ರೀಡೇಯಿಂದಲೇ ಈ ಎತ್ತರಕ್ಕೆ ಬೆಳೆದಿರುವುದು ಎಂದು ಪಂದ್ಯಾಟವನ್ನು ಉದ್ಘಾಟನೆ ಮಾಡಿ ಉಪ್ಪಿನಂಗಡಿ ಠಾಣಾ ಸಬ್ ಇನ್ಸ್ಪೆಕ್ಟರ್ ಓಮನ ತಮ್ಮ ಅನುಭವಗಳನ್ನು ಯುವ ಜನರಜೊತೆ ಹಂಚಿಕೊಂಡರು.ನಾಕೌಟ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ಐವತ್ತೊಂದು ತಂಡಗಳು ಬಾಗಿಯಾಗಿದ್ದವು.
ಕಾರ್ಯಕ್ರಮದಲ್ಲಿ ಸೀರೋ ಮಲಬಾರ್ ಯೂತ್ ಮೂವ್ಮೆಂಟ್ ಧರ್ಮ ಪ್ರಾಂತಿಯ ಅಧ್ಯಕ್ಷ ಶ್ರೀ ಸುನಿಲ್ ತೋಟ್ಟತಾಡಿ. ಫೋರೋನ ಧರ್ಮ ಗುರುಗಳಾದ ವಂದನಿಯ ತೋಮಸ್ ಪನಚಿಕ್ಕಲ್, ನೆಲ್ಯಾಡಿ ಪುಣ್ಯ ಕ್ಷೇತ್ರದ ವಂದನಿಯ ಫಾ.ಶಾಜಿ ಮಾತ್ಯು, ಫಾ. ಬಿಪಿನ್ ಟ್ರಸ್ಟಿಗಳಾದ ಈಪನ್ ವರ್ಗೀಸ್,ಶ್ರೀ ಜೋಬಿನ್, ಟೋಮಿ ಬಿಜು, ಶಿಬು ವರ್ಗೀಸ್, ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈಸನ್ ವಾಯಕ್ಕಾಲ ವಹಿಸಿದ್ದರು, ನವೀನ್, ನಯನ್, ಲಿಟ್ಟೋ, ಜಿತಿನ್ ಕ್ರೀಡಾ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.
ಪ್ರಥಮ ಸ್ಥಾನವನ್ನು ರೂಪಾಯಿ 15000 ಮತ್ತು ಟ್ರೋಫಿಯೊಂದಿಗೆ ಉಸ್ಮಾನ್ ಮತ್ತು ಜೀವನ್ ಪಡೆದರು ರೂಪಾಯಿಹತ್ತು ಸಾವಿರ ಮತ್ತು ಟ್ರೋಫಿಯೊಂದಿಗೆ ದ್ವಿತೀಯ ಸ್ಥಾನವನ್ನು ಇಕ್ಬಾಲ್ ಮತ್ತು ಖಲೀಲ್ ರೂಪಾಯಿ 5000 ಮತ್ತು ಪ್ರಶಸ್ತಿಯೊಂದಿಗೆ ತೃತೀಯ ಸ್ಥಾನವನ್ನು ಪಡೆದರು.ಜೇನಿನ್ ಸ್ವಾಗತಿಸಿ, ಪ್ರಕಾಶ್ ಕೆ.ಜೆ ಕಾರ್ಯಕ್ರಮ ನಿರ್ವಹಿಸಿದರು.ಜೋಬಿನ್ ವೀಕ್ಷಕ ವಿವರಣೆ ನೀಡಿದರು.