ತುಳು ಲಿಪಿ ಆನ್ಲೈನ್ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಪಂಚಮಿ ಬಿ.ಆರ್. ಶತಃಪ್ರತಿಶತ ಸಾಧನೆ

0

ಬೆಳ್ತಂಗಡಿ: ತುಳುನಾಡು ಸಹಿತ ವಿಶ್ವದ ನಾನಾ ಭಾಗಗಳಲ್ಲಿ ಇರುವ ತುಳು ಭಾಷಿಕರಲ್ಲಿ ತುಳು ಲಿಪಿಯ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ‘ಜೈ ತುಳುನಾಡು ಸಂಘಟನೆ ನಡೆಸುವ ತುಳು ಲಿಪಿ ಆನ್ಲೈನ್ ತರಗತಿಯಲ್ಲಿ ಭಾಗವಹಿಸಿದ್ದ ಬೆಳ್ತಂಗಡಿ ಮೂಲದ ಪಂಚಮಿ ಬಿ.ಆರ್. ಅವರು ಆನ್ಲೈನ್ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಧಾರವಾಡದಲ್ಲಿರುವ JJS ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪಂಚಮಿ ಅವರು ಕಾಸರಗೋಡಿನ ದೇಲಂಪಾಡಿ ಗ್ರಾಮದ ಬಂದ್ಯಡ್ಕ ನಿವಾಸಿ ರಾಜೇಶ್ ಹಾಗೂ ಬೆಳ್ತಂಗಡಿ ತಾಲೂಕಿನ ಪಟ್ರಮೆಯ ಚಿತ್ರಕಲಾ ದಂಪತಿಯ ಪುತ್ರಿ.

ಕಳೆದ ವರ್ಷ ನವಂಬರ್ 22ರಂದು ತುಳು ಲಿಪಿ ತರಗತಿಯನ್ನು ಆನ್ ಲೈನ್ ಮುಖಾಂತರ ಜೈ ತುಳುನಾಡು ಸಂಘಟನೆ ಆಯೋಜಿಸಿತ್ತು. 4 ತಿಂಗಳು ನಡೆದ ಈ ತರಗತಿಯಲ್ಲಿ ಮೂವರು ಶಿಕ್ಷಕರು ತುಳು ವರ್ಣಮಾಲೆ, ಕಾಗುಣಿತ ಮತ್ತು ಅಂಕೆಗಳ ಪಾಠವನ್ನು ಹೇಳಿ ಕೊಡುತ್ತಿದ್ದರು. ಬಳಿಕ, ಶಬ್ದಗಳು, ವಾಕ್ಯ ರಚನೆ, ತುಳುವಿನಿಂದ ಕನ್ನಡಕ್ಕೆ ಬರೆಯುವುದು, ಕನ್ನಡದಿಂದ ತುಳು ಭಾಷೆಯ ಲಿಪಿಯಲ್ಲಿ ಬರೆಯುವುದನ್ನು ಶಿಕ್ಷಕರು ದಿನನಿತ್ಯ ಹೇಳಿಕೊಡುತ್ತಿದ್ದರು.

ಈ ಪಾಠವೆಲ್ಲಾ ಮುಗಿದ ಬಳಿಕ ಜುಲೈ 23ರಂದು ಜೈ ತುಳುನಾಡು ಸಂಘಟನೆ ಮುಖಾತರ ಪರೀಕ್ಷೆ ನಡೆಸಲಾಗಿತ್ತು.ಈ ಪರೀಕ್ಷೆಗಳ ಫಲಿತಾಂಶ ಆಗಸ್ಟ್ 15ರಂದು ಪ್ರಕಟವಾಗಿದ್ದು ಪಂಚಮಿ ಬಿ.ಆರ್. ಅವರು 100ಕ್ಕೆ 100 ಅಂಕ‌ ಪಡೆದುಕೊಂಡು ಮೊದಲ ಸ್ಥಾನ ಪಡೆದಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ತುಳು ಅಕಾಡೆಮಿ ಪ್ರಮಾಣ ಪತ್ರ ವಿತರಿಸಲಿದೆ.

p>

LEAVE A REPLY

Please enter your comment!
Please enter your name here