ಉಜಿರೆ: ಶ್ರೀ.ಧ.ಮಂ.ಅ.ಸೆಕೆಂಡರಿ ಶಾಲೆ ಉಜಿರೆಯಲ್ಲಿ ಸರಕಾರದ ಸುತ್ತೋಲೆ ಪ್ರಕಾರ ವಿದ್ಯಾರ್ಥಿಗಳಿಗೆ ಆಯೋಜಿಸಿಲಾಗಿದ್ದ ಜನಪ್ರತಿನಿಧಿಗಳಿಂದ ಸಾಂಕೇತಿಕ “ಶೇಂಗ ಚುಕ್ಕಿ ವಿತರಣಾ” ಕಾರ್ಯಕ್ರಮಕ್ಕೆ ಉಜಿರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಉಷಾ ಕೆ ಕಿರಣ್ ಕಾರಂತ ಸಾಂಕೇತಿಕವಾಗಿ ಶೇಂಗಾ ಚುಕ್ಕಿ ವಿತರಿಸಿ, ಮಾತನಾಡಿ ವಿದ್ಯಾರ್ಥಿಗಳು ಸರಕಾರದ ವತಿಯಿಂದ ಕೊಡಲ್ಪಡುವ ಪೌಷ್ಟಿಕ ಆಹಾರವನ್ನು ಸರಿಯಾಗಿ ಸೇವಿಸಿ ಆರೋಗ್ಯವಂತರಾಗಿ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯ ಸುರೇಶ್.ಕೆ ರವರು ಶುಭ ಹಾರೈಸಿದರು.ಶಿಕ್ಷಕ ರಾಧಾಕೃಷ್ಣ ರವರು ಸ್ವಾಗತಿಸಿದರು.ಶಿಕ್ಷಕಿ ತ್ರಿವೇಣಿ ಧನ್ಯವಾದ ಸಮರ್ಪಿಸಿದರು.
p>