ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬೆಳ್ತಂಗಡಿ ತಾಲೂಕು ಕೊಕ್ಕಡ ವಲಯದ ಅನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಅನಾರು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆ.18ರಂದು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದುರ್ಗಾಪರಮೇಶ್ವರಿ ದೇವಸ್ಥಾನದ ಅಡಳಿತ ಸಮಿತಿ ಮುಖ್ಯಸ್ಥರಾದ ದೇವಪಾಲ ಅಜ್ರಿ ರವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರಾದ ಸುರೇಂದ್ರ ರವರು ಮಾತಾನಾಡುತ್ತಾ ಜ್ಞಾನವಿಕಾಸ ಕಾರ್ಯಕ್ರಮದ ಹುಟ್ಟು ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸುತ್ತಾ ಸಿರಿ ಧಾನ್ಯ ಬಳಕೆ ಮಾಡಿ ಆರೋಗ್ಯ ವೃದ್ದಿಸಿಕೊಳ್ಳುವಂತೆ ಮಹಿಳೆಯರು ಸೇವಿಸುವ ಪೌಷ್ಟಿಕ ಆಹಾರ ಸೇವನೆ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಸಿರಿಧಾನ್ಯ ಮಾರುಕಟ್ಟೆ ಅಧಿಕಾರಿಯವರಾದ ಸಂದೀಪ್ ರವರು ವಿವಿಧ ಸಿರಿ ಧಾನ್ಯಗಳ ಪರಿಚಯ ಮಾಡುವುದರೊಂದಿಗೆ ನವಣೆ, ಊದಲು, ಕೊರಳು, ಸಜ್ಜೆ,ಸಾಮೆ, ರಾಗಿ ಬಳಕೆ ವಿಧಾನ ಇವುಗಳಿಂದ ತಯಾರಿಸುವ ವಿವಿಧ ತಿಂಡಿಗಳ ಬಗ್ಗೆ ಬಳಕೆ ವಿಧಾನ ಮತ್ತು ರೋಗನಿರೋಧಕ ಶಕ್ತಿ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಅದ್ಯಕ್ಷತೆಯನ್ನು ಕೇಂದ್ರದ ಸದಸ್ಯರಾದ ಲಲಿತಾರವರು ವಹಿಸಿದ್ದರು.ವೇದಿಕೆಯಲ್ಲಿ ವಲಯ ಮೇಲ್ವಿಚಾರಕರಾದ ಭಾಗೀರಥಿ, ಗ್ರಾಮ ಪಂಚಾಯತ್ ಸದಸ್ಯರಾದ ಗಿರಿಜಾರವರು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಮನ್ವಯಧಿಕಾರಿಯವರಾದ ಮಧುರಾವಸಂತ್ ರವರು ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಚೈತ್ರ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಸದಾಶಿವರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಹಿದಾರವರು ಸ್ವಾಗತಿಸಿ, ಪ್ರೇಮಾವತಿಯವರು ಧನ್ಯವಾದ ನೀಡಿದರು.