ನಡ: ಸ್ವಾತಂತ್ರ್ಯೋತ್ಸವದ 77ನೇ ದಿನಾಚರಣೆಯನ್ನು ಸರಕಾರಿ ಪ್ರೌಢಶಾಲೆ ನಡದಲ್ಲಿ ಅಡಿಕೆ ಗಿಡಗಳನ್ನು ನೆಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಧ್ಯಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ನೆರವೇರಿಸಿ, ಶುಭ ಹಾರೈಸಿದರು.
ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾದ ಸುಧಾಕರ ಹಾಗೂ ಮಾಜಿ ಉಪಾಧ್ಯಕ್ಷರಾದ ಧರಣೇಂದ್ರ ಜೈನ್ ಇವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಮಾಜಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶೇಖರ ಅಜ್ರಿಯವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ., ಪೋಷಕರು ಹಾಗೂ ಊರವರ ಸಹಕಾರದಿಂದ ಪ್ರೌಢಶಾಲೆಯಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿದ್ದು, ಅಡಿಕೆ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಪ್ರೇಮ ಹೊಕ್ಕಿಲ, ಪ್ರೇಮಾ ಕೆಳಗಿನ ಸುರ್ಯ, ಲಕ್ಷ್ಮಣ ನಾಯ್ಕ, ಪೋಷಕರಾದ ಮೀನಾಕ್ಷಿ, ಚಂದ್ರಹಾಸ ಹಾಗೂ ಊರಿನ ಹಿರಿಯರಾದ ಮುನಿರಾಜ ಅಜ್ರಿ ಭಾಗವಹಿಸಿದ್ದರು.
ಅಡಿಕೆ ಗಿಡ ತೋಟಕ್ಕೆ ಅಗತ್ಯವಿರುವ ಸುಮಾರು 200 ಗಿಡಗಳನ್ನು ನಾವೂರಿನ ಎಂ.ಜೆ.ಅರ್ಥ್ ಮೂವರ್ಸ್ ಇದರ ಮಾಲಕರಾದ ಅನಿಲ್ ಇವರು ಒದಗಿಸಿದ್ದರು.