ಆಕರ್ಷಣೀಯ ರೀತಿಯಲ್ಲಿ ಜರುಗಿದ ಮನ್ ಶರ್ ವಿದ್ಯಾಸಂಸ್ಥೆಯ ಸ್ವಾತಂತ್ರ್ಯೋತ್ಸವ

0

ಬೆಳ್ತಂಗಡಿ: ಭಾರತ ದೇಶದೆಲ್ಲೆಡೆ ಸಂಭ್ರಮದಿಂದ ನಡೆದ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಇನ್ನಷ್ಟು ಸಾಕ್ಷಿ ಎಂಬಂತೆ ಬಹುಮಾನ್ಯ ಸಯ್ಯದ್ ಉಮರ್ ಅಸ್ಸಖಾಫ್ ತಂಗಳ್ ರವರ ಸಾರಥ್ಯದ ಮನ್ ಶರ್ ವಿದ್ಯಾಸಂಸ್ಥೆ ಗೇರುಕಟ್ಟೆ ಇಲ್ಲಿಯೂ ಬಹಳ ವಿಜೃಂಭಣೆಯಿಂದ ಮಾಡಲಾಯಿತು.

ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕೆ.ಎಂ ಮುಸ್ತಫಾ [KPCC ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಹಾಗೂ MEIF ಈಸ್ಟ್ ಝೋನಲ್ ಉಪಾಧ್ಯಕ್ಷರು] ಇವರು ಧ್ವಜಾರೋಹಣವನ್ನು ಮಾಡಿ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣ ಪ್ರಗತಿಯಿಂದ ದೇಶದ ಅಭಿವೃದ್ಧಿ ಇನ್ನಷ್ಟು ಬಲಿಷ್ಠವಾಗಲು ಸಾಧ್ಯ ಎಂಬ ಆಶಯದ ನುಡಿಗಳನ್ನು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.ಹಾಗೆಯೇ ವೇದಿಕೆಯಲ್ಲಿ ಮನ್ ಶರ್ ವಿದ್ಯಾಸಂಸ್ಥೆಯ ಜನರಲ್ ಮ್ಯಾನೆಜರ್ ಆಗಿರುವ ಹೈದರ್ ಮರ್ದಾಳ, ಸಂಸ್ಥೆಯ ಉಪಾಧ್ಯಕ್ಷರಾದ ಹಾಜಿ ಅಹ್ಮದ್ ಮೋನು ಎರುಕಡಪ್ಪು,ಸಂಸ್ಥೆಯ ಆಡಳಿತಾಧಿಕಾರಿ ರಶೀದ್ ಕುಪ್ಪೆಟ್ಟಿ,ಮನ್ ಶರ್ ಹಿತೈಷಿಗಳಾದ ಸಿದ್ದಿಕ್ ಪರಪ್ಪು, ಜಿ.ಡಿ ಅಶ್ರಫ್ ಗೇರುಕಟ್ಟೆ, ಪ್ಯಾರಾಮೆಡಿಕಲ್ ವಿಭಾಗದ ಗೌತಮಿ ಶರಣ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೌಸರ್ ಪಲ್ಲಾದೆ, ಪ್ರೌಢಶಾಲಾ ವಿಭಾಗದ ಹಂಸಶ್ರೀ, ಪ್ರಾಥಮಿಕ ಶಾಲಾ ವಿಭಾಗದ ರಮ್ಯಾ ಆರ್ ಹಾಗೂ ಮನ್ ಶರ್ ಅರೇಬಿಕ್ ವಿಭಾಗದ ಮುಖ್ಯಸ್ಥರಾದ ಅಬ್ದುಲ್ಲ ಸಖಾಫಿ ಉಪಸ್ಥಿತರಿದ್ದರು.ಇವರೆಲ್ಲರ ಉಪಸ್ಥಿತಿಯೊಂದಿಗೆ ಮುಖ್ಯ ಅತಿಥಿಯಾದ ಮುಸ್ತಫಾ ಅವರನ್ನು ಸನ್ಮಾನಿಸಲಾಯಿತು.

ಈ ಸ್ವಾತಂತ್ರ್ಯ ದಿನಾಚರಣೆಗೆ ಇನ್ನಷ್ಟು ಮೆರುಗು ನೀಡುವಂತೆ ಪದವಿ ಪೂರ್ವ ವಿಭಾಗದ ಉಪನ್ಯಾಸಕರಾದ ಮಹಮ್ಮದ್ ತೌಫೀಕ್ ಇವರ ಮಾರ್ಗದರ್ಶನದಂತೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ತಯಾರಿಸಲಾದ ಆಕರ್ಷಣೀಯ ಭಾರತ ನಕಾಶೆ ಮಾದರಿ ಯನ್ನು ಮುಖ್ಯ ಅತಿಥಿಯ ಮುಖೇನ ಉದ್ಘಾಟಿಸಲಾಯಿತು.ನಂತರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನೆರೆದಿದ್ದ ಎಲ್ಲರಿಗೂ ಸಿಹಿ ತಿಂಡಿಯನ್ನು ವಿತರಿಸಿ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ಮಾತ್ರವಲ್ಲದೆ ಈ ಆಕರ್ಷಣೀಯ ಕಾರ್ಯಕ್ರಮದ ಜೊತೆಗೆ ಗೇರುಕಟ್ಟೆ ಸ್ನೇಹಸಂಗಮ ಆಟೋ ಚಾಲಕರ ಸಂಘದ ವಿಶೇಷ ಆಹ್ವಾನದಂತೆ ಸ್ವಾತಂತ್ರ್ಯ ಘೋಷವಾಕ್ಯಗಳೊಂದಿಗೆ ವಿದ್ಯಾರ್ಥಿ ಜಾಥಾ ವನ್ನು ಏರ್ಪಡಿಸಲಾಯಿತು.

ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಸಂಸ್ಥೆಯ ಜನರಲ್ ಮ್ಯಾನೆಜರ್ ಹೈದರ್ ಮರ್ದಾಳರವರು ನೆರವೇರಿಸಿದರೆ ಪ್ರೌಢಶಾಲಾ ವಿಭಾಗದ ಶಿಕ್ಷಕಿಯಾಗಿರುವ ಹಂಸಶ್ರೀ ಬಿ.ಆರ್ ನಿರೂಪಿಸಿದರು.

LEAVE A REPLY

Please enter your comment!
Please enter your name here