ಕಕ್ಕಿಂಜೆ: ಮುಹ್ಯದ್ದೀನ್ ಜುಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಮದ್ರಸ ಕಕ್ಕಿಂಜೆ ಇದರ ವತಿಯಿಂದ ಭಾರತ ದೇಶದ ಏಕತೆ ಹಾಗೂ ಭಾವೈಕ್ಯತೆಯ ಸಂದೇಶವನ್ನು ಸಾರುವ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಮುಹ್ಯದ್ದೀನ್ ಜುಮಾ ಮಸೀದಿ ಮುದರ್ರಿಸರಾದ ಬಹು|| ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಜಲಾಲಿ ಯವರ ದುಆಶಿರ್ವಾಚನದ ಮೂಲಕ ಪ್ರಾರಂಭಿಸಲಾಯಿತು. ಜುಮಾ ಮಸೀದಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ಖಾದರ್ ರವರು ಧ್ವಜಾರೋಹಣ ನೆರವೇರಿಸಿಕೊಟ್ಟರು. ಎಸ್.ಕೆ.ಎಸ್.ಎಸ್.ಎಫ್ ಕಕ್ಕಿಂಜೆ ಶಾಖೆ ವತಿಯಿಂದ ಪೋಸ್ಟರ್ ಪ್ರದರ್ಶನ ಮಾಡಲಾಯಿತು.ಶಾಖಾ ಕಾರ್ಯದರ್ಶಿಯಾದ ನಾಸಿರ್ ಕಲ್ಲಗುಡ್ಡೆ ಪ್ರತಿಜ್ಞ ಭೋಧನೆ ನಡೆಸಿಕೊಟ್ಟರು. ನೂರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಭಾರತದ ಭೂಪಟದ ಆಕಾರದಲ್ಲಿ ಅಸೆಂಬ್ಲಿ ನಿರ್ವಹಿಸಿದ್ದು ಕಾರ್ಯಕ್ರಮದ ಆಕರ್ಷಕ ನೋಟವಾಗಿತ್ತು. ಮದ್ರಸ ಸದರ್ ಉಸ್ತಾದರಾದ ರಫೀಕ್ ಅಲ್-ಅಝ್ ಹರಿ ಆನೇಕಲ್ ರವರು ಮಾತನಾಡಿ “ರಾಷ್ಟ್ರ ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸುವುದು ಪ್ರಸ್ತುತ ಕಾಲದ ಬೇಡಿಕೆಯಾಗಿದೆ” ಎಂಬ ಸಂದೇಶವನ್ನು ನೀಡಿದರು.ಮದ್ರಸ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗೆ ಧ್ವನಿ ಗೂಡಿಸಿದರು.ವಿದ್ಯಾರ್ಥಿಗಳಾದ ಶಮ್ಮಾಸ್ ಹಾಗೂ ಸಾಫರ್ ಭಾಷಣ ನಡೆಸಿ ಭವ್ಯ ಭಾರತದ ಮಹತ್ವವನ್ನು ವರ್ಣಿಸಿದರು.ನಂತರ ನೂರುಲ್ ಇಸ್ಲಾಂ ಮದ್ರಸ ಕಕ್ಕಿಂಜೆ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಕಾರ್ಯದರ್ಶಿ ನಝೀರ್ ಹಾಗೂ ಸದಸ್ಯರು ಮದ್ರಸ ಮುಅಲ್ಲಿಮರಾದ ಇಸ್ ಹಾಕ್ ಫೈಝಿ, ಶಿಹಾಬ್ ಅಶ್ರಫಿ, ಸಾಬಿತ್ ಅಶ್ರಫಿ, ಸಿದ್ದೀಕ್ ಮನ್ನಾನಿ, ಅಬ್ದುಲ್ ರಹಿಮಾನ್ ಯಮಾನಿ ಉಪಸ್ಥಿತರಿದ್ದರು.ದರ್ಸ್ ವಿಧ್ಯಾರ್ಥಿ ಝಿಯಾದ್ ತಿಂಗಳಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.ಎಸ್.ಕೆ.ಎಸ್.ಎಸ್.ಎಫ್ ಕಕ್ಕಿಂಜೆ ಶಾಖಾ ಸದಸ್ಯರು, ಜಲಾಲಿಯ್ಯ ದರ್ಸ್ ವಿದ್ಯಾರ್ಥಿಗಳು, ಮದ್ರಸ ವಿದ್ಯಾರ್ಥಿಗಳು, ಪೋಷಕರು, ಊರಿನ ಹಿರಿಯರು ಕಾರ್ಯಕ್ರಮದ ಯಶಸ್ವಿಯ ಕೇಂದ್ರ ಬಿಂದುಗಳಾಗಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.