


ಪುದುವೆಟ್ಟು: ಇಲ್ಲಿಯ ನೆಕ್ಕಿಲಾಡಿ ಶುಭ ನಿಲಯ ಶೇಖರ್ ಗೌಡ ರವರ ಮನೆಯ ಹಿಂಬದಿಯಲ್ಲಿ ಕಟ್ಟಿಗೆ ರಾಶಿಯಲ್ಲಿ ಕಾಳಿಂಗ ಸರ್ಪವೊಂದು ಬಂದು ಕುಳಿತಿದ್ದು ಧರ್ಮಸ್ಥಳದ ಉರಗ ಪ್ರೇಮಿ ಸ್ನೇಕ್ ಪ್ರಕಾಶ್ ರವರಿಗೆ ಕರೆ ಮಾಡಿ ತಿಳಿಸಿದ ಕೂಡಲೇ ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟಿರುತ್ತಾರೆ.


ಶೇಖರ್ ಗೌಡ ರವರು ಧರ್ಮಸ್ಥಳ ಶ್ರೀ.ಮಂ.ಅ.ಹಿ.ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.









