ಉಜಿರೆ: ಎಸ್.ಡಿ .ಯಂ ಐ.ಟಿ ಉಪನ್ಯಾಸಕರಿಗೆ ಪಿ.ಯಚ್.ಡಿ ಪದವಿ

0

ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (VTU) ಪಿ.ಯಚ್.ಡಿ ಪದವಿ ನೀಡಿದೆ.

ಇನ್‌ಫೋರ್ಮೇಶನ್‌ಸಯನ್ಸ್ ((ISE) ವಿಭಾಗದ ಸಹ ಪ್ರಾದ್ಯಾಪಕಿ ಉಷಾ, ಡಾ.ಜೆ.ವಿ.ಗೋರಬಾಳ, ಮಾರ್ಗದರ್ಶನದಲ್ಲಿ Design and Development of a Novel Approach for Sentiment Analysis and  Blog Classification using Deep Learning Techniques ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದು, ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕಿ ಸ್ವಾತಿ ಫಡ್ಕೆ ರವರು, ಡಾ.ವಿಜಯಾ ಡಿ.ಪಿ.ಆಳ್ವ, ಮಾರ್ಗದರ್ಶನದಲ್ಲಿ A study on the corrosion inhibition of industrially important steel by synthetic heterocyclic compounds ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿರುವರು.

ಅರ್ಟಿಫಿಶಿಯ್ ಇಂಟೆಲಿಜೆನ್ಸ್ ಮತ್ತು ಡಾಟಾ ಸಯನ್ಸ್ (AI&DS) ವಿಭಾಗದ ಸಹ ಪ್ರಾದ್ಯಾಪಕ ಅಂತೀಶ್ ರವರು, ಡಾ. ರಾಜ್‌ಕಿರಣ್‌ಬಲ್ಲಾಳ್, ಮಾರ್ಗದರ್ಶನದಲ್ಲಿDesign, Analysis and Development of Super Capacitor Based Vector Controlled Induction Motor Drive ಎಂಬ ವಿಷಯದ ಕುರಿತು, ಹಾಗೂ ಸಿವಿಲ್ ಇಂಜಿನಿಯರಿಂಗ್‌ವಿಭಾಗದ ಸಹ ಪ್ರಾದ್ಯಾಪಕ ವಿನಯ್ ಶಾಮ್ ರವರು ಡಾ.ಯಂ.ನಾಗೇಶ್, ಮಾರ್ಗದರ್ಶನದಲ್ಲಿ Studies on Alternative Binders from Industrial/ Agricultural Waste for Rural Sustainability ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿರುವರು.ಉಪನ್ಯಾಸಕರ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಪ್ರಶಂಸಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here