ಬೆಳ್ತಂಗಡಿ: ಸಂತ ತೆರೇಸಾ ಪ್ರೌಢ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

0

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢ ಶಾಲೆಯ ಮಹಾಸಭೆ ಆ.4ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆಯೊಂದಿಗೆ ದೇವರ ಅನುಗ್ರಹ ಬೇಡಿದರು.ಸ್ವಾಗತ ನೃತ್ಯದೊಂದಿಗೆ ಬಂದ ಅತಿಥಿಗಳನ್ನು ಪ್ರೀತಿಯ ಸ್ವಾಗತವನ್ನು ಕೋರಿದರು.ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಗಳ ಉಪಕಾರ್ಯದರ್ಶಿ ವಂದನೀಯ ಭಗಿನಿ ಜೂಲಿಯನ ಪಾಯ್ಸ್‌ರವರು ಅಧ್ಯಕ್ಷೀಯ ಸ್ಥಾನದಿಂದ ರಕ್ಷಕ-ಶಿಕ್ಷಕ ಕಾರ್ಯಕಾರಿ ಸಮಿತಿಯ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಿದರು.ರಕ್ಷಕ-ಶಿಕ್ಷಕ ಸಂಘದ ಒಂದು ನಿಧಿ ಆರಂಭಿಸಿ ಅದನ್ನು ಪ್ರಗತಿಪರ ಯೋಜನೆ ರೂಪಿಸಲು ಉಪಯೋಗಿಸುವಂತೆ ಕರೆ ಇತ್ತರು.

ಮುಖ್ಯ ಅತಿಥಿ ಸ್ಥಾನ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಧನರಾಜ್ ಟಿ.ಎಮ್. ಪಿ.ಎಸ್.ಐ ಬೆಳ್ತಂಗಡಿ ಇವರು ಸಭೆಯನ್ನು ಉದ್ದೇಶಿಸಿ ತಮ್ಮ ಶಾಲಾ ನೆನಪುಗಳನ್ನು ಮೆಲುಕು ಹಾಕಿ ಪೋಷಕರು ಮಕ್ಕಳ ಪ್ರಗತಿಯಲ್ಲಿ ಎಷ್ಟು ಮಹತ್ತರ ಪಾತ್ರ ವಹಿಸಬೇಕು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯ ಉಪಯೋಗ- ದುರುಪಯೋಗ ಇದರಿಂದ ಆಗುವ ಸೈಬರ್ ಕ್ರೈಂ ಅಪರಾಧಗಳು, ಇದರಿಂದ ನಮ್ಮ ಮಕ್ಕಳನ್ನು ಹೇಗೆ ಕಾಪಾಡಬಹುದು, ಎಂಬುದರ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದರು.

ನಮ್ಮ ಮಕ್ಕಳನ್ನು ಸುಸಂಸ್ಕೃತರಾಗಿ ಬೆಳೆಸಲು ಶಿಕ್ಷಕರು ಶ್ರಮಿಸುವಾಗ ಹೆತ್ತವರು ಕೈ ಜೋಡಿಸಿದರೆ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.2023 ಏಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಅತ್ಯುತ್ತಮ ಅಂಕಗಳನ್ನು ಗಳಿಸಿದ ಲಿನ್ ಜೋಯಲ್ (606/625) ಮತ್ತು ರಿಶಾನಾ ಸಿ.ವಿ (527/625) ಇವರನ್ನು ಸನ್ಮಾನಿಸಲಾಯಿತು.

2023-24ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಚುನಾವಣೆಯನ್ನು ಶಿಕ್ಷಕಿ ಥಿಯೋಫಿಲರವರು ನಡೆಸಿದರು. 2022-23ನೇ ಸಾಲಿನ ವರದಿಯನ್ನು ವಿಜ್ಞಾನ ಶಿಕ್ಷಕಿ ನಿಶಾರವರು ಸವಿಸ್ತಾರವಾಗಿ ಮಂಡಿಸಿದರು. ಸಂತ ತೆರೇಸಾ ಶಿಕ್ಷಣ ಸಂಸ್ಥೆಯ ಸಂಚಾಲಕಿ ವಂ.ಭಗಿನಿ ತೆರೇಸಿಯ ಶೇರ ಹಾಗೂ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜೆ.ಸಿ ನಾರಾಯಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಂ.ಭಗಿನಿ ಪವಿತ್ರಾರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ವಿನ್ಸೆಂಟ್‌ರವರು ಸಹಕರಿಸಿದ ಸರ್ವರನ್ನು ವಂದಿಸಿದರು.ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here