ಬೆಳ್ತಂಗಡಿ ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾ ಸಭೆ

0

ಬೆಳ್ತಂಗಡಿ: ಆ.7 ರಂದು ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾ ಸಭೆಯು ಜರುಗಿತು.

ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಲಾಯಿತು.ಸಂತ ತೆರೇಸಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಭಗಿನಿ ತೆರೇಸಿಯ ಸೆರಾ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಗಿನಿ ಡಾ. ಜೂಡಿತ್  ಲೂಯಿಸ್ “ಇವರು ಹೆತ್ತವರು ಮತ್ತು ಮಕ್ಕಳ ಸಂಬಂಧ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ”ದ ಬಗ್ಗೆ ಮಾತನಾಡಿದರು.ಭಗಿನಿ ರೆನಿಟಾ ರವರು ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯವನ್ನು ಸಭೆಯ ಮುಂದಿಟ್ಟರು.

ಮುಖ್ಯ ಅತಿಥಿಗಳಾಗಿ ಸಂತ ತೆರೇಸಾ ಕಾನ್ವೆಂಟಿನ ಸುಪಿರಿಯರ್ ಭಗಿನಿ ಜೆಸಿಂತಾ ಬರೆಟ್ಟೊ, ಸಂತ ತೆರೇಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಲೀನಾ ಡಿಸೋಜಾ  ಹಾಗೂ ಸಂತ ತೆರೇಸಾ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ. ಹೆರಾಲ್ಡ್ ನೋರೋನಃ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷ ಸ್ಥಾನದಲ್ಲಿದ್ದ ಭಗಿನಿ ತೆರೆಸಿಯ ಸೆರಾ ಇವರು ಅಧ್ಯಕ್ಷೀಯ ಹಿತನುಡಿಗಳನ್ನು ನುಡಿದರು.ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಆರೋಗ್ಯ ರವರು ಎಲ್ಲರನ್ನು ಆಧಾರಪೂರ್ವಕವಾಗಿ ಸ್ವಾಗತಿಸಿ ಕಾಲೇಜಿನ ನಿಯಮಾವಳಿಗಳನ್ನು ಹೆತ್ತವರಿಗೆ ವಿವರಿಸಿದರು.ಉಪನ್ಯಾಸಕರಾದ ಶ್ರೀ ಪ್ರದೀಪ್ ಪಿಂಟೋ ರವರು ವಂದಿಸಿದರು.ಉಪನ್ಯಾಸಕರಾದ ನ್ಯಾನ್ಸಿ ಸಿಕ್ವೇರಾ ಹಾಗೂ ನಿರೂಪಮರವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here