

ಕಳಿಯ: ಬೊಳ್ಳುಕಲ್ಲು ಪರಿಸರದ ಸುಂದರಿ ಮತ್ತು ಅವರ ಮಗ ವಾಸವಿರುವ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಈ ಜಡಿ ಮಳೆಗೂ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದನ್ನು ಅರಿತು ಮಾನವೀಯ ದೃಷ್ಟಿಯಿಂದ ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ನಗರ ಬೊಳ್ಳುಕಲ್ಲು ಭಜನಾ ಮಂಡಳಿಯ ನೇತೃತ್ವದಲ್ಲಿ ಇವರ ಮನೆಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ದಿನೇಶ್ ಗೌಡ ಕಲ್ಕೂರ್ಣಿ, ಉಪಾಧ್ಯಕ್ಷ ಯಶೋಧರ ಗೌಡ ಹಿರ್ಯ, ಜೊತೆ ಕಾರ್ಯದರ್ಶಿ ರಕ್ಷಿತ್ ಬಾಕಿಮಾರ್, ಕೋಶಾಧಿಕಾರಿ ದೀಕ್ಷಿತ್ ಹಿರ್ಯಾ, ಸಂಚಾಲಕರಾದ ಸುರೇಶ್ ಕಲ್ಕುರ್ಣಿ, ಮೋಹನ್ ಬೇರ್ಕೆತೊಡಿ, ಕುಶಾಲಪ್ಪ ಪೆರಾಜೆ, ಸದಸ್ಯರಾದ ಪದ್ಮನಾಭ ಕಲ್ಕುರ್ಣಿ ಉಪಸ್ಥಿತರಿದ್ದರು.