ಬೆಳ್ತಂಗಡಿ: ಕಳೆದ 2 ವರುಷದಿಂದ ಕಾಳುಮೆಣಸಿನ ದರ ಯಥಾಸ್ಥಿತಿ ಕಾಯ್ದುಕೊಂಡು ಇದೀಗ ಒಂದು ವಾರದಲ್ಲಿ ಪ್ರತೀ ದಿನ ದರ ಏರಿಕೆ ಪಡೆದುಕೊಂಡಿದೆ.ಕಳೆದ ಒಂದು ತಿಂಗಳ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ದರ ರೂ.480 ಇತ್ತು.ಇದೀಗ ದಿಡೀರಣೆ 600 ರ ಗಡಿ ಸಮೀಪಿಸಿದೆ.ಹವಾಮಾನ ವ್ಯತ್ಯಾಸ ದಿಂದ ಇಳುವರಿ ಕುಂಠಿತಗೊಂಡ ಕಾರಣ ದಿಡೀರಣೆ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.
ಕಾಳುಮೆಣಸು ದಾಸ್ತಾನು ಇಟ್ಟುಕೊಂಡಿರುವ ರೈತರ ಮುಖದಲ್ಲಿ ಮಂದಹಾಸ:
ಮಧ್ಯಮ ವರ್ಗದ ರೈತರು ತನ್ನ ಕಷ್ಟಕ್ಕೆ ಉಪಕಾರಿಯಾಗುತ್ತದೆ ಎಂದು ಅಡಿಕೆಯನ್ನು ಮಾರಾಟ ಮಾಡಿ ಕಾಳುಮೆಣಸನ್ನು ಹಾಗೆಯೇ ದಾಸ್ತಾನು ಇರಿಸಿಕೊಳ್ಳುವ ಹವ್ಯಾಸ ಇದೆ.ಇದೀಗ ಭಾರಿ ಬೇಡಿಕೆ ಬಂದ ಕಾರಣ ಅಂತ ರೈತರು ಸಂತಸದಲ್ಲಿದ್ದಾರೆ ಸದ್ಯಕ್ಕೆ ಕಾಡುನೋಡುವ ತಂತ್ರದಲ್ಲಿರುವ ರೈತರು ಇನ್ನೂ ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ.
p>