ಮಡಂತ್ಯಾರು: ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನಲ್ಲಿ 18 ಕರ್ನಾಟಕ ಬೆಟಾಲಿಯನ್-ಮಂಗಳೂರು ಇದರ ಆಶ್ರಯದಲ್ಲಿ ಎನ್.ಸಿ.ಸಿ. ವಾರ್ಷಿಕ ಶಿಬಿರವು ಜರುಗಿತು.ಶಿಬಿರವನ್ನು 18 ಕರ್ನಾಟಕ ಬೆಟಾಲಿಯನ್-ಮಂಗಳೂರು ಇದರ ಕಮಾಡಿಂಗ್ ಆಫೀಸರ್ ಕರ್ನಲ್ ಗಣೇಶ್.ಎಸ್.ಅಯ್ಯರ್‌ರವರು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಲ್ಲಿ ಎನ್.ಸಿ.ಸಿ.ಯ ಪಾತ್ರ ಮಹತ್ವವಾಗಿದೆ ಎಂದರು.
ಹತ್ತು ದಿನಗಳ ಅವಧಿಯ ತರಬೇತಿ ಶಿಬಿರದಲ್ಲಿ ಮಡಿಕೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 500ಕ್ಕೂ ಹೆಚ್ಚು ಎನ್.ಸಿ.ಸಿ. ಕೆಡೆಟ್‌ಗಳು ಭಾಗವಹಿಸಿದ್ದರು.ವಿದ್ಯಾರ್ಥಿಗಳಿಗೆ ರೈಫಲ್ ಶೂಟಿಂಗ್, ಮ್ಯಾಪ್‌ರೀಡಿಂಗ್, ಪ್ರಥಮ ಚಿಕಿತ್ಸೆ, ಇತ್ಯಾದಿ ಅನೇಕ ಮಿಲಿಟರಿ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.
ಶಿಬಿರದಲ್ಲಿ 18 ಕರ್ನಾಟಕ ಬೆಟಾಲಿಯನ್‌ನ ಆಡಳಿತಾಧಿಕಾರಿ ಕರ್ನಲ್ ಅಮಿತಾಬ್ ಸಿಂಗ್, ಎನ್.ಸಿ.ಸಿ. ಅಧಿಕಾರಿಗಳಾದ ಕ್ಯಾಪ್ಟನ್ ಸುಧಾ ಶೆಟ್ಟಿ, ಲೆಪ್ಟಿನೆಂಟ್ ಆಲ್ವಿನ್ ಜಾರ್ಜ್, ಫಸ್ಟ್ ಆಫೀಸರ್ ನಿರಂಜನ್ ಜೈನ್, ಸೆಕೆಂಡ್ ಆಫೀಸರ್ ಜಾರ್ಜ್, ಥರ್ಡ್ ಆಫೀಸರ್ ಸಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ರೆ|ಫಾ|ಸ್ಟಾನಿ ಗೋವಿಯಸ್, ಪ್ರಾಂಶುಪಾಲ ಪ್ರೊ|ಅಲೆಕ್ಸ್ ಐವನ್ ಸಿಕ್ವೇರಾ ರವರು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.