

ಅಳದಂಗಡಿ: ನಿರೀಕ್ಷಾರವರು ಸಿ ಎ ಉತ್ತೀರ್ಣರಾದ ಬಗ್ಗೆ ನಿರೀಕ್ಷಾರವರ ತಾಯಿ ಪುಷ್ಷಾವತಿಯವರ ತವರು ಮನೆಯವರು ಅಳದಂಗಡಿ ನಮನ ಸಭಾಭವನದಲ್ಲಿ ಜು.9ರಂದು ಸಂತೋಷ ಕೂಟ ಮತ್ತು ಅಭಿನಂದನ ಕಾರ್ಯಕ್ರಮ ಏರ್ಪಡಿಸಿದ್ದರು.
ಪೂಜ್ಯರಾದ ತಂದೆ ತಾಯಿ ಮತ್ತು ಗುರು ಹಿರಿಯರ ಆಶೀರ್ವಾದದ ಒಟ್ಟಿಗೆ ಕಠಿಣ ಪರಿಶ್ರಮ ಪಟ್ಟರೆ ಯಾವುದನ್ನೂ ಸಾಧಿಸಬಹುದು ಎಂದು ಸಿ ಎ ನಿರೀಕ್ಷಾ ಎನ್ ಅಭಿಪ್ರಾಯಪಟ್ಟರು.
ಸಿಎ ನಿರೀಕ್ಷಾರವರ ತಂದೆ ನಿತ್ಯಾನಂದರವರು ಬಂದ ಅತಿಥಿಗಳನ್ನು ಸ್ವಾಗತಿಸಿಧರು. ಮಾವನವರಾದ ಚಿತ್ತರಂಜನ್,ಅಜ್ಜ ಅಜ್ಜಿ ವಿಮಲಾ ಸದಾನಂದ ಪೂಜಾರಿಯವರು ಶುಭ ಹಾರೈಸಿ ನೆನಪಿನ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.ಸೇರಿದ ಬಂಧುಗಳೆಲ್ಲರೂ ತುಂಬಿದ ಮನಸ್ಸಿನಿಂದ ಶುಭ ಹಾರೈಸಿದರು ಕಾರ್ಯಕ್ರಮವನ್ನು ಅಶೋಕ್ ನಾವೂರು ರವರು ನಿರೂಪಿಸಿದರು.
ಭಾಗವಹಿಸಿದ ತಂದೆ ಹಾಗೂ ತಾಯಿ ಮತ್ತು ಬಂಧುಗಳಿಗೆ, ಕುಟುಂಬಸ್ಥರಿಗೆ ಮಾವ ಚಿತ್ತರಂಜನ್ ರವರು ಧನ್ಯವಾದ ಸಮರ್ಪಿಸಿದರು.