

ನ್ಯಾಯತರ್ಪು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಳ ಇದರ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಸರ್ಕಾರದ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಜು.5ರಂದು ರಚಿಸಲಾಯಿತು.
ಅಧ್ಯಕ್ಷರಾಗಿ ಮೋಹನ ಗೌಡ ತಾರೆಮಾರು, ಉಪಾಧ್ಯಕ್ಷರಾಗಿ ರೀತಾ ನಾಳ ಆಯ್ಕೆಯಾದರು.
ಸದಸ್ಯರಾಗಿ ಸೋಮಪ್ಪ ಗೌಡ ಕುಬಾಯ, ಲೋಕಯ್ಯ ಮುಂಚಲೆಕ್ಕಿ, ಅಣ್ಣಿ ನಾಳ, ಅಂತೋನಿ ಮುಂಚಲೆಕ್ಕಿ, ಮಹಮ್ಮದ್ ಅಲಿ ಕುಕ್ಕುಡಿ, ಎನ್.ಮೊಹಮ್ಮದ್ ರಫೀಕ್ ಜಾರಿಗೆ ಬೈಲು, ಮಹಮ್ಮದ್ ರಫೀಕ್ ಎನ್ ಜಾರಿಗೆ ಬೈಲು, ಹಕೀಂ ಕುಕ್ಕುಡಿ, ಪುಷ್ಪ ನಾಳ, ಸುನಂದಾ ಪಂಚಮಲಕೋಡಿ, ಪ್ರತಿಭಾ ನಾಳ, ಭವ್ಯ ಕೊಜಂಬಲ, ಶಾಹಿದ ಜಾರಿಗೆ ಬೈಲು, ಮುಮ್ತಾಜ್ ಆದರ್ಶ ನಗರ, ಸುಮಯ್ಯ ನಾಳ, ಝೋಹರ ಆದರ್ಶ ನಗರ ಇವರು ಆಯ್ಕೆಯಾದರು.
ಈ ಸಮಯದಲ್ಲಿ ರಾಜೇಶ್ ಕೆ ಸಮೂಹ ಸಂಪನ್ಮೂಲ ವ್ಯಕ್ತಿ ಗುರುವಾಯನಕೆರೆ ಹಾಗೂ ಪಂಚಾಯತ್ ನಾಮ ನಿರ್ದೇಶಕ ಸದಸ್ಯ ವಿಜಯ್ ಕುಮಾರ್ ಕಲಾಯಿತೊಟ್ಟು, ಮುಖ್ಯೋಪಾಧ್ಯಾಯರಾದ ಪಿಲಿಪ್ ರೊನಾಲ್ಡ್ ಡಿಮೆಲ್ಲೊ ಮತ್ತು ಶಿಕ್ಷಕ ವೃಂಧ ಉಪಸ್ಥಿತರಿದ್ದರು.