ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ತಣ್ಣೀರುಪಂತ ಗ್ರಾಮಸಭೆಯ ಪ್ರಕಟಣೆ ನೀಡದ ವಿಚಾರ- ಗ್ರಾಮಸಭೆಯಲ್ಲಿ ತರಾಟೆಗೆತ್ತಿಕೊಂಡ ಗ್ರಾಮಸ್ಥರು- ಸರಿಪಡಿಸುವುದಾಗಿ ಪಿಡಿಓ ಭರವಸೆ

0

ತಣ್ಣೀರುಪಂತ: ಬೆಳ್ತಂಗಡಿ ತಾಲೂಕಿನಲ್ಲಿ ಮನೆ ಮನೆಗೆ ತಲುಪುವ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಗ್ರಾಮಸಭೆಯ ಪ್ರಕಟಣೆ ನೀಡದೇ ಇರುವ ವಿಚಾರಕ್ಕೆ ಸಂಬಂಧಿಸಿ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ತರಾಟೆಗೆತ್ತಿಗೊಂಡ ಘಟನೆ ತಣ್ಣೀರುಪಂತ ಗ್ರಾಮಸಭೆಯಲ್ಲಿ ನಡೆದಿದೆ.
ತಣ್ಣೀರುಪಂತ ಗ್ರಾಮ ಪಂಚಾಯತ್‌ನ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಜು.11ರಂದು ಕಲ್ಲೇರಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರದಲ್ಲಿ ಗ್ರಾ.ಪಂ. ಅಧ್ಯಕ್ಷೆ ಫಾತಿಮಾ ಇಶ್ರತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಶು ವೈದ್ಯಧಿಕಾರಿ ಜಯಕೀರ್ತಿ ಜೈನ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

2022-23ನೇ ಸಾಲಿನ ಪಾಲನಾ ವರದಿಯನ್ನು ಗ್ರಾ.ಪಂ.ಕಾರ್ಯದರ್ಶಿ ಆನಂದರವರು ಸಭೆಯಲ್ಲಿ ಮಂಡಿಸಿದರು.

2023-24ರ ಸಾಲಿನ ಜಮಾ ಖರ್ಚು ವರದಿಯನ್ನು ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ವೈ.ಎಸ್.ರವರು ಸಭೆಯಲ್ಲಿ ಓದಿ ಹೇಳಿದರು.

ಬಳಿಕ ಚರ್ಚೆ ನಡೆದಾಗ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕೆ.ಎಸ್.ಅಬ್ದುಲ್ ಕರಾಯ, ಆಶ್ರಫ್ ಕಲ್ಲೇರಿ ಮತ್ತಿತರರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ಕಡಿಮೆಯಾಗಿದೆ. ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ಗ್ರಾಮಸಭೆಯ ಪ್ರಕಟಣೆ ಹಾಕದಿರುವುದು ಇದಕ್ಕೆ ಕಾರಣವಾಗಿದೆ. ತಾಲೂಕಿನ ಪ್ರತಿಯೊಂದು ಮನೆ, ಮನೆಗೆ ತಲುಪುವ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಜಾಹೀರಾತು ನೀಡದಿರುವ ಕಾರಣ ಗ್ರಾಮಸ್ಥರಿಗೆ ಮಾಹಿತಿ ದೊರೆತಿಲ್ಲ ಎಂದು ಅಭಿವೃದ್ಧಿ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು.ಮುಂದಿನ ದಿನಗಳಲ್ಲಿ ಹೀಗಾಗುವುದಿಲ್ಲ.ಇದನ್ನು ಸರಿಪಡಿಸುವ ಎಂದು ಪಿಡಿಓ ಪುಟ್ಟಸ್ವಾಮಿ ವೈ.ಎಸ್. ಹೇಳಿ ಚರ್ಚೆಗೆ ತೆರೆ ಎಳೆದರು.ಬಳಿಕ ಇತರ ವಿಚಾರಗಳ ಕುರಿತು ಚರ್ಚೆ ನಡೆಯಿತು.

ಗ್ರಾ.ಪಂ. ಉಪಾಧ್ಯಕ್ಷ ಅಯ್ಯೂಬ್ ಡಿ.ಕೆ. ಹಾಗೂ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here