ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಬೆಳ್ತಂಗಡಿ ಜೈನ್ ಮಿಲನ್ ಖಂಡನೆ

0

ಬೆಳ್ತಂಗಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಜೈನ ಕ್ಷೇತ್ರದ ಜೈನ ಮುನಿ ಆಚಾರ್ಯ 108 ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆಯನ್ನು ಖಂಡಿಸಿ ಸಮಗ್ರ ತನಿಖೆಗಾಗಿ ಆಗ್ರಹ ಮತ್ತು ಸಮಾಜದ ಉಳಿದ ಮುನಿಗಳ, ತ್ಯಾಗಿಗಳಿಗೆ ಸೂಕ್ತ ರಕ್ಷಣೆ ಒದಗಿಸಿಕೊಡುವಂತೆ ಬೆಳ್ತಂಗಡಿ ಜೈನ ಸಮಾಜದ ಸಂಘಟನೆಗಳಿಂದ ಬೆಳ್ತಂಗಡಿ ತಹಶೀಲ್ದಾರ ಸುರೇಶ್ ಕುಮಾರ್ ಮುಖಾಂತರ ಮುಖ್ಯಮಂತ್ರಿಗೆ ಜು.10 ರಂದು ಮನವಿ ಸಲ್ಲಿಸಲಾಯಿತು.

ಇದೆ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ, ಬಸದಿ ಸ್ವಚ್ಚತಾ ತಂಡ ಬೆಳ್ತಂಗಡಿ, ಜೈನ್ ಮಿಲನ್ ವೇಣೂರು, ದೀಮತಿ ಜೈನ ಮಹಿಳಾ ಸಮಾಜ ಉಜಿರೆ, ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ವೇಣೂರು ಹಾಗೂ ಸಮಸ್ತ ಜೈನ ಬಾಂಧವರ ಪರವಾಗಿ ಮನವಿ ಸಲ್ಲಿಸಿ ಸೂಕ್ತ ತನಿಖಾಧಿಕಾರಿಯನ್ನು ನೇಮಿಸಿ ಎಲ್ಲಾ ಆಯಾಮಗಳಲ್ಲಿ ಸಮಗ್ರ ತನಿಖೆ ನಡೆಸಿ ಲೋಪ ದೋಷಗಳು ಉಳಿಯದಂತೆ ದೋಷಾರೋಪಣ ಪಟ್ಟಿ ಸಲ್ಲಿಸಿ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ-8 ರ ನಿರ್ದೇಶಕ ಬಿ.ಸೋಮಶೇಖರ ಶೆಟ್ಟಿ ಉಜಿರೆ, ಜೈನ್ ಮಿಲನ್ ಬೆಳ್ತಂಗಡಿ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ್, ದಿಗಂಬರ ಜೈನ್ ತೀರ್ಥ ಕ್ಷೇತ್ರ ಸಮಿತಿ ವೇಣೂರು ಇದರ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ನ್ಯಾಯವಾದಿ ಶಶಿಕಿರಣ್ ಜೈನ್ ಬೆಳ್ತಂಗಡಿ, ನವೀನ್ ಚಂದ್ರ ಬಳ್ಳಾಲ್ ವೇಣೂರು,ಪ್ರಶಾಂತ್ ಜೈನ್ ಉಜಿರೆ, ಸಂಪತ್ ಕುಮಾರ್ ಜೈನ್, ಅಶೋಕ್ ಜೈನ್,ಪಣಿರಾಜ್ ಜೈನ್, ವಿತೇಶ್ ಜೈನ್ ಪಡಂಗಡಿ, ನಿತೇಶ್ ಜೈನ್ ಪುತ್ತಿಲ, ಸಂತೋಷ್‌ ಕುಮಾರ್ ಜೈನ್ ಪಡಂಗಡಿ, ಪ್ರಮೋದ್ ಕುಮಾರ್ ಜೈನ್ ವೇಣೂರು, ಸುಕೇಶ್ ಕಡಂಬು, ಶೀತಲ್ ಜೈನ್ ಶಿರ್ಲಾಲು, ಅರಿಹಂತ್ ಜೈನ್ ಅಳದಂಗಡಿ, ನವೀನ್ ಜೈನ್ ಅಳದಂಗಡಿ, ಪ್ರವೀಣ್ ಜೈನ್ ಅಳದಂಗಡಿ,ಉದಯ ಕುಮಾರ್ ಕಂಬಳಿ, ವೃಷಭ ರಾಜ ಆರಿಗ, ಸುಮಂತ್ ಕುಮಾರ್ ಜೈನ್, ಉದಯ ವರ್ಮಾ, ವಿನಯ ಪ್ರಸಾದ್, ಲಾಲಾ ಚಂದ್ರನಮನ್ ರಾಜ್, ಜೀವಂಧ‌ರ ಜೈನ್, ಪದ್ಮಶ್ರೀ ಜೈನ್, ರಕ್ಷಿತ್ ಜೈನ್, ದಿವ್ಯಾ ಪ್ರಧಾನ್ ಜೈನ್, ಅಭಿನಂದನ್, ಅಜಯ್ ಕುಮಾರ್ ಜೈನ್, ಗುಣಪಾಲ್ ಶೆಟ್ಟಿ ಬಿ, ಬಿ, ನಿರ್ಮಲ್ ಕುಮಾರ್ ಮತ್ತಿತರರು ಹಾಜರಿದ್ದರು.

p>

LEAVE A REPLY

Please enter your comment!
Please enter your name here