ಬೆಳಾಲು: ಅನ್ಸಾರುಲ್ ಇಸ್ಲಾಂ ಮದರಸದ ರಕ್ಷಕ ಶಿಕ್ಷಕ ಸಂಘದ ಸಭೆಯು ಬೆಳಾಲು ಮದರಸ ಸಭಾಂಗಣದಲ್ಲಿ ಜು.9 ರಂದು ಆದಂ ಟಿ.ಎಚ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಬೆಳಾಲು ಅನ್ಸಾರೀಯ ಜುಮಾ ಮಸೀದಿಯ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಶರೀಪ್ ಬೆಳಾಲು ವಿದ್ಯಾರ್ಥಿ, ಪಾಲಕ, ಶಿಕ್ಷಕ, ಆಡಳಿತ ಮಂಡಳಿ ಸಮಾನ ರೀತಿಯ ಆಸಕ್ತಿ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ.ನಾವೆಲ್ಲರೂ ಒಟ್ಟಾಗಿ ಸೇರಬೇಕು.ಅನೇಕ ಸಂದರ್ಭಗಳಲ್ಲಿ ಮಕ್ಕಳಿಗೆ ಪಾಲಕರೇ ಆದರ್ಶ ಪ್ರಾಯರಾಗಿರುತ್ತಾರೆ.ಬದ್ಧತೆ, ನಿಷ್ಠೆ ಇವುಗಳನ್ನು ಮಕ್ಕಳು ನೋಡಿ ಅನುಸರಿಸಿ ಕಲಿಯುತ್ತಾರೆ.ತಂದೆ ತಾಯಿ ಮಕ್ಕಳಿಗೆ ನೀಡುವ ಬಹುದೊಡ್ಡ ಕೊಡುಗೆ ಶಿಕ್ಷಣ.ಅದನ್ನು ನಾವು ನಮ್ಮ ಮಕ್ಕಳಿಗೆ ನೀಡಬೇಕು ಎಂದು ಹೇಳಿ ಸ್ವಾಗತಿಸಿದರು.
ಜುಮಾ ಮಸೀದಿ ಖತೀಬರಾದ ಬದ್ರುದ್ದೀನ್ ಸಖಾಪಿ ಉಸ್ತಾದರು, ಮಕ್ಕಳಿಗೆ ಶಿಸ್ತು ಕಲಿಸುವುದು ತಂದೆ ತಾಯಿಗಳ ಜವಬ್ದಾರಿಯಾಗಿದೆ.ಸುಸಂಸ್ಕೃತ ಜವಾಬ್ದಾರಿಯನ್ನು ಪೋಷಕರು ಅನುಸರಿಸುತ್ತಾ ಹೋದರೆ ಮಾದರಿ ಪೋಷಕರಾಗಬಹುದು ಎಂದು ಹೇಳಿ ಅಲ್ಲಾಹನ ನಾಮದೊಂದಿಗೆ ಉದ್ಘಾಟಿಸಿದರು.
ಸದರ್ ಉಸ್ತಾದ ಅಯ್ಯುಬ್ ಮಳ್ಹರಿ ಮಾತನಾಡಿ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ವಿಚಾರಿಸ ಬೇಕು ಅದು ನಿಮ್ಮ ಪ್ರೋತ್ಸಹ ಆಗಿರುತ್ತದೆ .ಅದೇ ರೀತಿ ಮಕ್ಕಳೊಂದಿಗೆ ತಂದೆ ತಾಯಿಯಂದಿರ ಸಂಬಂಧ ಹೇಗಿರಬೇಕು ತಿಳಿಸಿದರು.
ಸತ್ತಾರ್ ಮದನಿ ಮುಹಲ್ಲಿಮ್ ಉಸ್ತಾದ್ ರವರು ಮಾತನಾಡಿ ಪೋಷಕರು ಪ್ರೋತ್ಸಹ ಇನ್ನು ಮುಂದೆಯೂ ಇರಲಿ ಎಂದರು.
ಅಧ್ಯಕ್ಷರು ಮಾತನಾಡಿ ಮಕ್ಕಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು ಮಕ್ಕಳು ದಾರಿ ತಪ್ಪುವಾಗ ನಾವು ತಿದ್ದಿ ಸರಿಮಾಡಬೇಕು.ಮೊಬೈಲ್ ಮತ್ತು ಇತರ ಮಾದಕ ವಸ್ತುಗಳ ಹಿಂದೆ ಹೋದರೆ ನಮ್ಮ ಮಕ್ಕಳು ನಮಗೆ ಮಾರಕವಾಗುತ್ತದೆ ಎಂದರು.
ಮದರಸ ಉಸ್ತುವಾರಿಯಾಗಿ ಹಮೀದ್ ಗೊಳಿದೊಟ್ಟು ಹಾಗೂ ಹಂಝ ಬೊಟ್ಟುರವರನ್ನು ನೇಮಕ ಮಾಡಲಾಯಿತು.
ಶರೀಪ್ ಧನ್ಯವಾದ ಸಲ್ಲಿಸಿದರು.