


ಬಾರ್ಯ: ಬಾರ್ಯ ಗ್ರಾಮ ಪಂಚಾಯತ್ ನ 2023-24 ಪ್ರಥಮ ಸುತ್ತಿನ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ಜು.4 ರಂದು ಜರುಗಿತು.
ಬಾರ್ಯ ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ವರ್ಷದ ಅನುಪಾಲನ ವರದಿಯನ್ನು ಅಭಿವೃದ್ಧಿ ಅಧಿಕಾರಿ ಸುಶೀಲಾ ಸಭೆಯಲ್ಲಿ ವಾಚಿಸಿದರು.

ಪಂಚಾಯತು ಕಾರ್ಯದರ್ಶಿ ಶೀಲಾ.ಎಸ್ 2023-24 ರ ಗ್ರಾಮಸ್ಥರ ಬೇಡಿಕೆಯನ್ನು ಸಭೆಯಲ್ಲಿ ವಾಚಿಸಿದರು.
ಬೆಳ್ತಂಗಡಿ ಸಮಾಜ ಕಲ್ಯಾಣಾಧಿಕಾರಿ ಸಭೆಯ ನೋಡಲಾಧಿಕಾರಿಯಾಗಿ ಸಭೆಯನ್ನು ನಡೆಸಿಕೊಟ್ಟರು.
ಪಂಚಾಯತು ಅಧ್ಯಕ್ಷೆ ಉಷಾ ಕಿರಣ್ ಸಭಾ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯತು ಉಪಾಧ್ಯಕ್ಷ ಪಿ.ಕೆ ಉಸ್ಮಾನ್ ಹಾಗೂ ಪಂಚಾಯತು ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾರ್ಯ ಮತ್ತು ಪುತ್ತಿಲ ಗ್ರಾಮಸ್ಥರು ಬಾಗವಹಿಸಿದರು.