ಉಜಿರೆ: ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಿಂದ ಗ್ರಂಥಮಿತ್ರ ಕಾರ್ಯಕ್ರಮ

0

ಉಜಿರೆ: ಜು.1ರಂದು ಡಿಜಿಟಲ್ ಗ್ರಂಥಾಲಯ ಹಾಗು ಮಾಹಿತಿ ಕೇಂದ್ರ ಉಜಿರೆ‌ ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆ ಉಜಿರೆಯ ವಿದ್ಯಾರ್ಥಿಗಳಿಗಾಗಿ ‘ಸಣ್ಣ ಕಥೆ’ ಬರೆಯುವ ಅಭಿಯಾನವನ್ನು ಆಯೋಜಿಸಲಾಗಿತ್ತು.ಒಂದು ಕಥೆಗೆ ಸಂಬಂಧಪಟ್ಟ ವಿಷಯವನ್ನು ನೀಡಿ, ಮಕ್ಕಳು ಕಥೆಯನ್ನು ತಾವೇ ರಚಿಸಿ, ಅದನ್ನು ಓದಿ ಹೇಳುವ ಕಾರ್ಯವನ್ನು ನೀಡಲಾಗಿತ್ತು. ಶಾಲೆಯ ಎಂಟನೇ ತರಗತಿಯ ಸುಮಾರು 30 ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.‌
ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ಗ್ರಂಥಮಿತ್ರ ಎಂಬ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮ ಪಂಚಾಯತ್ ನ ಸಹಾಯೋಗದೊಂದಿಗೆ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿ, ಶ್ರೀ. ಧ. ಮಂ. ಕಾಲೇಜಿನ ಯೋಜನಾಧಿಕಾರಿಗಳು ಹಾಗೂ ಸ್ವಯಂಸೇವಕರು, ಮತ್ತು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here