ಉಜಿರೆ ರತ್ನಮಾನಸದಲ್ಲಿ ಯಂತ್ರಗಳ ಪ್ರಾತ್ಯಕ್ಷಿಕೆ, ಕಾಯಿ ಸಿಪ್ಪೆ ಮತ್ತು ಸೌದೆ ಒಡೆಯುವ ಯಂತ್ರಗಳ ಪ್ರಾತ್ಯಕ್ಷಿಕೆ

0

ಉಜಿರೆ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆಯಲ್ಪಡುವ ಉಜಿರೆಯ ರತ್ನಮಾನಸ ವಸತಿ ನಿಲಯದಲ್ಲಿ ಇಂದು ಕಾಯಿ ಸಿಪ್ಪೆ ಮತ್ತು ಸೌದೆ ಒಡೆಯುವ ಯಂತ್ರಗಳ ಪ್ರಾತ್ಯಕ್ಷಿಕೆ ಜೂ.29 ರಂದು ನಡೆಯಿತು.


ಎಸ್.ಡಿ.ಎಂ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ರವರು ದೀಪ ಬೆಳಗಿಸಿ ಚಾಲನೆ ನೀಡಿ, ಆಧುನಿಕ ಯಂತ್ರಗಳ ಕುರಿತಾಗಿ ತಿಳಿದುಕೊಳ್ಳುವುದು ಒಂದು ಜೀವನ ಶಿಕ್ಷಣವಾಗಿದೆ.ನಾವು ಅದನ್ನು ತಿಳಿದು ನಮ್ಮ ಕೃಷಿ ಕೆಲಸಗಳಿಗೆ ಆಧುನಿಕತೆಯನ್ನು ಅಳವಡಿಸಬೇಕು ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಎಸ್.ಡಿ.ಎಂ ಸೆಕೆಂಡರಿ ಶಾಲೆಯ ಮುಖ್ಯೋಪಾದ್ಯಾಯ ಸುರೇಶ್ ಕುಮಾರ್ ರವರು ಈ ಯಂತ್ರದ ಶಕ್ತಿಯು 20 ಆಳುಗಳ ಶಕ್ತಿಗೆ ಸಮನಾಗಿದೆ.ಇದರಿಂದ ಮಾನವನ ಕೆಲಸವು ಸುಲಭ ಮತ್ತು ಸರಳವಾಗಿಸಲು ಸಹಾಯಕವಾಗಿದೆ.ಮಂತ್ರ-ತಂತ್ರಗಳಿಂದ ಮನುಷ್ಯ ಯಂತ್ರಗಳ ಕಡೆ ಮುಖ ಮಾಡಿರುವುದಕ್ಕೆ ಇವುಗಳು ಸಾಕ್ಷಿಯಾಗಿದೆ ಎಂದು ಹೇಳಿದರು.


ಧರ್ಮಸ್ಥಳ ಡಿಎಂಸಿಯ ಶರಣ್‌, ನಿಲಯದ ಪಾಲಕ ಯತೀಶ್ ಹಾಗೂ ಅದ್ಯಾಪಕರುಗಳಾದ ರವಿಚಂದ್ರ.ಬಿ , ಉದಯ್ ರಾಜ್, ತ್ರಿಭುವನ್ ಉಪಸ್ಥಿತರಿದ್ದರು.ಇಂತಹ ಹೊಸ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯು ವಿದ್ಯಾರ್ಥಿಗಳಿಗೆ ಜೀವನ-ಶಿಕ್ಷಣದಲ್ಲಿ ರಜಾ ದಿನದ ಸದ್ಬಳಕೆ ಮಾಡಿಕೊಳ್ಳಲು ಸಾದ್ಯವಾಯಿತು.

p>

LEAVE A REPLY

Please enter your comment!
Please enter your name here