ಕರಾಯ ದ.ಕ.ಜಿ.ಪಂ.ಸ.ಪ್ರೌಢಶಾಲೆಯಲ್ಲಿ ಹದಿಹರೆಯದ ಕಿಶೋರಿಯರ ಸಮಸ್ಯೆಗಳು ಕಾರ್ಯಕ್ರಮ

0

ಕರಾಯ: ಸಮಾಜ ಕಾರ್ಯ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಹಾಗೂ ದ. ಕ.ಜಿ.ಪಂ.ಪ್ರೌಢ ಶಾಲೆ ಕರಾಯ ಹಾಗೂ ಗ್ರಾಮ ಪಂಚಾಯತ್ ತಣ್ಣೀರು ಪಂತ ಇವರ ಸಹಯೋಗದಲ್ಲಿ ಹದಿಹರೆಯದ ಕಿಶೋರಿಯರ ಸಮಸ್ಯೆಗಳು ಎಂಬ ಕಾರ್ಯಕ್ರಮವು ಜೂ.21ರಂದು ನಡೆಯಿತು.ರಶ್ಮಿತಾ ಎಸ್.ಆರ್ ತೃತೀಯ ವಿ.ಎಸ್ ಡಬ್ಲೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ನಿರೂಪಣೆ ಮಾಡಿರುತ್ತಾರೆ. ಮೊದಲಿಗೆ ಬಬಿತಾ ಕುಮಾರಿ ತೃತೀಯ ಬಿ.ಎಸ್.ಡಬ್ಲ್ಯೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇವರು ಪ್ರಾರ್ಥನೆಯನ್ನು ಮಾಡಿದರು. ನಂತರ ಪ್ರಶಾಂತಿ ತೃತೀಯ ಬಿ.ಎಸ್.ಡಬ್ಲ್ಯೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇವರು ಕಾರ್ಯಕ್ರಮದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಉದ್ಘಾಟಕರಾದ ಇಶ್ರತ್ ಅಧ್ಯಕ್ಷರು ಗ್ರಾಮ ಪಂಚಾಯತ್ ತಣ್ಣೀರುಪಂತ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉದ್ಘಾಟಕರಾದ ಫಾತಿಮಾತ್ ಇಶ್ರತ್ ಇವರು ಹದಿಹರೆಯದ ಮಕ್ಕಳ ವಯಸ್ಸಿನಲ್ಲಿ ನಡೆಯುವಂತಹ ದೈಹಿಕವಾದ ಮತ್ತು ಮಾನಸಿಕವಾದ ಬದಲಾವಣೆಗಳು ಹದಿಹರೆಯ ವಯಸ್ಸಿನವರಲ್ಲಿಯ ಹೆಚ್ಚು ಗೊಂದಲವನ್ನುಂಟುಮಾಡುತ್ತದೆ ಹಾಗೆಯೆ ಇದು ಹೊಂದಾಣಿಕೆಗೆ ತುಂಬಾ ಕಷ್ಟ ಉಂಟು ಮಾಡುತ್ತದೆ ಎಂದು ಹೇಳಿದರು. ಹಾಗೆ ಇದು ನೈಸರ್ಗಿಕವಾದ ಪ್ರಕ್ರಿಯೆಯಾಗಿದ್ದು ಸಾಮಾನ್ಯವಾಗಿ ನಡೆಯುವ ಕ್ರಿಯೆ ಆಗಿದೆ ಎಂದು ಹೇಳಿದರು.

ನಂತರ ಮುಖ್ಯ ಅತಿಥಿಗಳಾದ ನಂದೀಶ್ ವೈ.ಡಿ ಮುಖ್ಯಸ್ಥರು ಸಮಾಜಕಾರ್ಯ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇವರು ಪ್ರಸ್ತಾವಿಕ ನುಡಿಯನ್ನು ಹೇಳಿದರು. ಹದಿಹರೆಯದ ವಿಷಯವು ಅಶ್ಲೀಷತೆಯನ್ನು ಹೊಂದಿಲ್ಲ ಅದು ನಿಮ್ಮ ತಪ್ಪು ಕಲ್ಪನೆ ನೀವೆಲ್ಲಾ ಯಾವುದೇ ಹಿಂಜರಿಕೆ ಇಲ್ಲದೆ ಮುಕ್ತವಾಗಿ ಈ ವಿಷಯವನ್ನು ಇಲ್ಲಿ ಚರ್ಚಿಸಬಹುದು ಹಾಗೂ ಎಲ್ಲರೂ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.ನಂತರ ಮುಖ್ಯ ಅತಿಥಿಗಳಾದ ಲೋಲಾಕ್ಷಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕಲ್ಲೇರಿ ಇವರು ಮಕ್ಕಳ ವೈಯಕ್ತಿಕ ಸರ್ವತೋಮುಖ ಬೆಳವಣಿಗೆಯ ಧನಾತ್ಮಕ ವಿಷದ ಬಗ್ಗೆ ಹೇಳಿದರು.

ಅಧ್ಯಕ್ಷತೆ ಸ್ಥಾನವನ್ನು ವಹಿಸಿರುವಂತಹ ಟಿ.ಬಿ.ಬಸಲಿಂಗಪ್ಪ ಮುಖ್ಯೋಪಾಧ್ಯಾಯರು ದ.ಕ. ಜಿ. ಪಂ. ಸರಕಾರಿ ಪ್ರೌಢಶಾಲೆ ಕರಾಯ ಇವರು ಈ ವಯಸ್ಸಲ್ಲಿ ಮಕ್ಕಳು ಬೇಗ ಉದ್ರೇಕಗೊಳ್ಳುತ್ತಾರೆ ಈ ಕೋಪವನ್ನು ಹೇಗೆ ನಿಯಂತ್ರಿಸಬೇಕೆಂದು ಈ ಕಾರ್ಯಕ್ರಮದ ಮೂಲಕ ನಿಮಗೆ ತಿಳಿಯುತ್ತದೆ ಎಂದು ಹೇಳಿದರು.

ನಂತರ ಸಂಪನ್ಮೂಲ ವ್ಯಕ್ತಿಯಾದಂತಹ ರಮ್ಯಾ.ಬಿ ಆಪ್ತ ಸಮಾಲೋಚಕರು ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ ಬೆಳ್ತಂಗಡಿ ತಾಲೂಕು ಇವರು ಹದಿಹರೆಯದ ಕಿಶೋರಿಯರ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯದ ಕುರಿತು ಮಾತನಾಡಿದರು ಋತುಚಕ್ರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಕೊನೆಯದಾಗಿ ಸಂಪನ್ಮೂಲ ವ್ಯಕ್ತಿಗಳಿಗೆ ಗಿಡವನ್ನು ನೀಡುವ ಮೂಲಕ ಕಿರು ನೆನಪಿನ ಸ್ಮರಣಿಕೆಯನ್ನು ನೀಡಲಾಯಿತು. ನಂತರ ದ್ವಿತೀಯ ಬಿ ಎಸ್ ಡಬ್ಲ್ಯೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಧನ್ಯವಾದಗಳು ತಿಳಿಸಿದರು.

p>

LEAVE A REPLY

Please enter your comment!
Please enter your name here