ವೇಣೂರು ಶ್ರೀ ಗು.ಸ್ವಾ.ಸೇವಾ ಸಂಘ ಹಾಗೂ ಯುವವಾಹಿನಿ ಘಟಕ ವತಿಯಿಂದ ತಿಮ್ಮಣಬೆಟ್ಟು ಸರಕಾರಿ ಶಾಲಾ ಮಕ್ಕಳಿಗೆ ಬರವಣಿಗೆ ಪುಸ್ತಕ ವಿತರಣೆ

0

ವೇಣೂರು: ಆಂಗ್ಲಮಾಧ್ಯಮ ಶಿಕ್ಷಣದ ಪೈಪೋಟಿಯ ಮಧ್ಯೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಇಂದು ಉಳಿಸಿಕೊಳ್ಳುವುದೇ ಸವಾಲಾಗಿದೆ.ಆದರೆ ದೇಶದಲ್ಲಿ ಉನ್ನತ ಮಟ್ಟದ ಸಾಧನೆಗೈದವರು, ಉತ್ತಮ ಉದ್ಯೋಗ ಪಡೆದುಕೊಂಡವರು, ಅತ್ಯುತ್ತಮ ಸ್ಥಾನದಲ್ಲಿರುವವರು ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದವರಾಗಿದ್ದಾರೆ.ದಾನಿಗಳ ಸಹಕಾರದಿಂದಲೇ ಇಂದು ಸರಕಾರಿ ಶಾಲೆಗಳು ಸರ್ವತೋಮುಖ ಅಭಿವೃದ್ಧಿ ಕಂಡಿದ್ದು, ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದು ವೇಣೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಪೊಕ್ಕಿ ಹೇಳಿದರು.

ವೇಣೂರು ಗ್ರಾ.ಪಂ. ವ್ಯಾಪ್ತಿಯ ಕರಿಮಣೇಲು ಗ್ರಾಮದ ತಿಮ್ಮಣಬೆಟ್ಟು ಸ.ಉ.ಪ್ರಾ. ಶಾಲೆಯ ಮಕ್ಕಳಿಗೆ ವೇಣೂರು ಶ್ರೀ ಗು.ಸ್ವಾ. ಸೇವಾ ಸಂಘ ಹಾಗೂ ವೇಣೂರು ಯುವವಾಹಿನಿ ಘಟಕದ ವತಿಯಿಂದ ಒದಗಿಸಲಾದ ಬರವಣಿಗೆ ಪುಸ್ತಕದ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕಿ ಸುನಂದ ಅವರು ಮಾತನಾಡಿ, ಶಿಕ್ಷಣಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ನಾರಾಯಣ ನಾಯ್ಕ ಅವರು ನೀಡಿದ ಬರವಣಿಗೆ ಪುಸ್ತಕವನ್ನು ವಿತರಿಸಲಾಯಿತು.
ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷೆ ಹರಿಣಿ ಕರುಣಾಕರ್, ಕಾರ್ಯದರ್ಶಿ ಸುಜಿತ್ ಪೂಜಾರಿ, ವೇಣೂರು ಶ್ರೀ ಗು.ಸ್ವಾ. ಸೇವಾ ಸಂಘದ ಕಾರ್ಯದರ್ಶಿ ಸತೀಶ್ ಪೂಜಾರಿ ಉಜಿರ್‍ದಡ್ಡ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಜು ನಾಯ್ಕ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸುನಂದ ಸ್ವಾಗತಿಸಿ, ಶಿಕ್ಷಕಿ ಸುಚಿತ್ರಾ ಡಿಸೋಜ ನಿರ್ವಹಿಸಿ, ವಂದಿಸಿದರು.ಇದೇ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ನಾರಾಯಣ ನಾಯ್ಕ ಅವರು ನೀಡಿದ ಬರವಣಿಗೆ ಪುಸ್ತಕವನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here