ಪಜಿರಡ್ಕ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ

0

ಕಲ್ಮಂಜ: ಕಲ್ಮಂಜದ ಹಸಿರು ತಪಸ್ಸು ಸಂಘಟನೆ ಆಶ್ರಯದಲ್ಲಿ, ಬೆಳ್ತಂಗಡಿ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಕಲ್ಮಂಜ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಬೆಳ್ತಂಗಡಿ ಅರಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಧಾರ್ಮಿಕ ಕೇಂದ್ರಗಳಲ್ಲಿ ಗಿಡಗಳನ್ನು ನೆಡುವುದರಿಂದ ದೈವಿಕ ಭಾವನೆಗಳು ಉಂಟಾಗುತ್ತವೆ. ಅರಣ್ಯ ಬೆಳೆಸಲು ಹಾಗೂ ರಕ್ಷಿಸಲು ಇದು ಪ್ರೇರಣೆ ನೀಡುತ್ತದೆ. ಮುಂಡಾಜೆ, ಕಲ್ಮಂಜ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಹಿಸುತ್ತಿರುವುದು ಶ್ಲಾಘನೀಯ”ಎಂದು ಹೇಳಿದರು.


ಹಸಿರು ತಪಸ್ಸು ಸಂಘಟನೆಯ ಸಂಚಾಲಕ ಸತೀಶ್ ತಂಟ್ಯ ಅಧ್ಯಕ್ಷತೆ ವಹಿಸಿದ್ದರು.ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಉಜಿರೆ ಎಸ್ ಡಿ ಎಂ ಕಾಲೇಜಿನ ಎನ್ ಸಿ ಸಿ ಘಟಕದ ಸೃಜನ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ವಿಭಾಗದ ಯೋಜನಾಧಿಕಾರಿ ನಮಿತಾ ಕೆ.ಆರ್, ವಿವೇಕಾನಂದ ಗ್ರಾಮ ಸಮಿತಿಯ ಸುಭಾಶ್ಚಂದ್ರ ಜೈನ್ ಉಪಸ್ಥಿತರಿದ್ದರು.ಡಿ.ಆರ್.ಎಫ್.ಒಗಳಾದ ಹರಿಪ್ರಸಾದ್, ರವೀಂದ್ರ ಅಂಕಲಗಿ, ಶರತ್ ಶೆಟ್ಟಿ, ಸಿ ಎ ಬ್ಯಾಂಕ್ ನಿರ್ದೇಶಕ ರಾಘವ ಕಲ್ಮಂಜ, ವ್ಯವಸ್ಥಾಪಕ ಪ್ರಸನ್ನ ಪರಾಂಜಪೆ, ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆ, ರೋಟರಿ ಸಮುದಾಯದಳದ ವೆಂಕಟೇಶ್ವರ ಭಟ್, ಕಲ್ಮಂಜ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಹೆಬ್ಬಾರ್, ಜಗದೀಶ್ ನಾಯ್ಕ್, ಉಪನ್ಯಾಸಕ ಗಣೇಶ ಶೆಂಡ್ಯೆ,ಪಾಂಡುರಂಗ ಕಾಕತ್ಕರ್, ಶ್ರೀನಿವಾಸರಾವ್, ಜಯಂತ ರಾವ್, ಗೋವಿಂದ ದಾಮಲೆ, ಪ್ರಕಾಶ್ ಭಟ್, ಶಶಿಧರ ಖಾಡಿಲ್ಕಾರ್, ಸುರೇಶ ಗೋಖಲೆ, ಅರ್ಚಕ ರಾಜೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.


ಮುಂಡಾಜೆ ಕಾಲೇಜಿನ ಎನ್ನೆಸ್ಸೆಸ್ ಹಾಗೂ ಉಜಿರೆ ಕಾಲೇಜಿನ ಎನ್‌ ಸಿಸಿ ಘಟಕದ ವಿದ್ಯಾರ್ಥಿಗಳು ಸಹಕರಿಸಿದರು. ಪವನ್ ಕಾಕತ್ಕರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಫಡಕೆ ಸ್ವಾಗತಿಸಿದರು.ಚಿತ್ರಾ ಭಿಡೆ ವಂದಿಸಿದರು. ತೆಂಗು, ಬಿಲ್ವಪತ್ರೆ, ಸಂಪಿಗೆ ಸಂಹಿತೆಗಳ ಸಹಿತ ಒಟ್ಟು 150 ಗಿಡಗಳನ್ನು ನಾಟಿ ಮಾಡಲಾಯಿತು.ಕಳೆದ ವರ್ಷ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳ ತಟದಲ್ಲಿ ಮಣ್ಣಿನ ಸವಕಳಿ ಉಂಟಾಗದಂತೆ ಬಿದಿರನ್ನು ನಾಟಿ ಮಾಡಲಾಗಿದೆ.
ಪ್ಲಾಸ್ಟಿಕ್ ಬಳಕೆ ಇಲ್ಲ: ಕಳೆದ ಮೂರು ವರ್ಷಗಳ ಹಿಂದೆ ಸಮಾನ ಮನಸ್ಕರು ಸೇರಿ ಆರಂಭಿಸಿದ ಹಸಿರು ತಪಸ್ಸು ತಂಡ ಪರಿಸರ ಸಂರಕ್ಷಣೆ, ಅರಣ್ಯದ ಬೆಳವಣಿಗೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿದೆ. ವನಮಹೋತ್ಸವ ಕಾರ್ಯಕ್ರಮದಂದು ಫಲಹಾರ,ಊಟ,ಸಭಾ ಕಾರ್ಯಕ್ರಮ ಸಹಿತ ಎಲ್ಲೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ ಕಾರ್ಯಕ್ರಮವನ್ನು ನೆರವೇರಿಸಿದೆ.ಸಭಾ ಕಾರ್ಯಕ್ರಮಕ್ಕೂ ಬಟ್ಟೆಯ ಬ್ಯಾನರನ್ನು ಬಳಸಲಾಗಿತ್ತು.

LEAVE A REPLY

Please enter your comment!
Please enter your name here