ಪುದುವೆಟ್ಟು: ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

0

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಜೂ.17ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ವಿವಿಧ ಸಂಘಗಳನ್ನು ಬೆಳ್ತಂಗಡಿ ತಾಲೂಕಿನ ಪ್ರೌಢಶಾಲಾ ವಿಭಾಗದ ಶಿಕ್ಷಣ ಸಂಯೋಜಕಿ ಚೇತನಾಕ್ಷಿ ಹಾಗೂ ನಿಡ್ಲೆ ಮತ್ತು ಉಜಿರೆ ವಲಯದ ಸಿ ಆರ್ ಪಿ ಯಾದ ಪ್ರತಿಮಾ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ವಿವಿಧ ಸಂಘಗಳಿಗೆ ಚಾಲನೆಯನ್ನು ನೀಡಿದರು.ದೀಪ ಪ್ರಜ್ವಲನೆಯ ಮೂಲಕ ಸಂಘಗಳಿಗೆ ಚಾಲನೆ ನೀಡಿ ಮಾತನಾಡಿದ ಚೇತನಾಕ್ಷಿ ಯವರು ಶಾಲೆಯಲ್ಲಿ ಸಂಘಗಳು ಸಹಪಠ್ಯ ಚಟುವಟಿಕೆಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ, ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಈ ಸಂಘಗಳು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಿಮಾರವರು ಈ ಶಾಲೆಯ ವಾತಾವರಣ ಕಲಿಕೆಗೆ ಪೂರಕವಾಗಿದೆ, ಸಂಘಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಹಮ್ಮಿಕೊಂಡು ಶಾಲೆಗೆ ಹೆಸರನ್ನು ತರುವಂತಹ ವಿದ್ಯಾರ್ಥಿಗಳಾಗಿ ಎಂದು ಈ ಸಂದರ್ಭದಲ್ಲಿ ಹರಸಿದರು.

ಶಾಲಾ ಶಿಕ್ಷಕರಾದ ನಿಶಾಂತ್ ಕುಮಾರ್ ರವರು ಮಾತನಾಡಿ ಈ ದಿನ ಉದ್ಘಾಟನೆಗೊಂಡಂತಹ ಎಲ್ಲ ಸಂಘಗಳ ಜವಾಬ್ದಾರಿ ಮತ್ತು ಉದ್ದೇಶಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಶೀನಪ್ಪ ಗೌಡರವರು ಸಂಘಗಳ ಮಾರ್ಗದರ್ಶಿ ಶಿಕ್ಷಕರ ಸಲಹೆ ಸೂಚನೆಯೊಂದಿಗೆ ಈ ಶೈಕ್ಷಣಿಕ ವರ್ಷದಲ್ಲಿ ಕಲಿಕೆಗೆ ಪೂರಕವಾಗುವ ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತಾಗಲಿ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಂತಹ ಕಾರ್ಯಕ್ರಮದಲ್ಲಿ ಸುಜಾತ ಬಿ ಯವರು ಸ್ವಾಗತಿಸಿ, ಪವನ್ ಕುಮಾರ್ ಅವರು ಧನ್ಯವಾದಗೈದ ಕಾರ್ಯಕ್ರಮವನ್ನು ಪುಷ್ಪಲತಾ ರವರು ನಿರೂಪಿಸಿದರು.

ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು

p>

LEAVE A REPLY

Please enter your comment!
Please enter your name here