


ಉಜಿರೆ: ಜೂ.13ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಮೂರನೇ ತರಗತಿಯಿಂದ ಐದನೇ ತರಗತಿಯ ವಿದ್ಯಾರ್ಥಿಗಳ ಶಿಕ್ಷಕ ಪೋಷಕರ ಸಭೆ ನಡೆಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಡಾ.ಅತುಲ್. ಎಸ್ ಸೆಮಿತಾ ಪ್ರೊಫೆಸರ್ ಎಸ್ ಡಿ ಎಮ್ ಸ್ನಾತಕೋತ್ತರ ವಿಭಾಗ ಉಜಿರೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.



ನೀತು ಕಾರ್ಯಕ್ರಮ ನಿರೂಪಣೆ ಮಾಡಿದರು.ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ರವರು ಶಾಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಶಾಲಾ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.ವಿಷಯವಾರು ಶಿಕ್ಷಕರು ತಮ್ಮ ಪರಿಚಯ ಮಾಡಿ ,ತಾವು ಭೋದಿಸುವ ಬೋಧನಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.








