ನಾರಾವಿ: ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ 15ವರ್ಷಗಳ ಹಿಂದೆ ಪ್ರಾರಂಭಗೊಂಡು ಮುಖ್ಯ ಕಛೇರಿ ಗುರುವಾಯನಕೆರೆಯಲ್ಲಿದ್ದು, ವೇಣೂರು, ಬಿ.ಸಿ.ರೋಡ್, ಕಕ್ಕಿಂಜೆಯಲ್ಲಿ ಈಗಾಗಲೆ ಶಾಖೆಗಳನ್ನು ಹೊಂದಿದ್ದು ಇದೀಗ ನಾರಾವಿ ಗ್ರಾಮ ಮತ್ತು ಹತ್ತಿರದ ಹಳ್ಳಿಗಳು-ಕೃಷಿ, ಶಿಕ್ಷಣ, ಆರೋಗ್ಯ, ವಾಣಿಜ್ಯೋದ್ಯಮ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಬೆಳೆಯುತ್ತಿರುವ ಒಂದು ಮಾದರಿ ಗ್ರಾಮ ಪಂಚಾಯತ್ ಎಂದು ಸಮೀಕ್ಷೆಯ ಪ್ರಕಾರ ತಿಳಿದು ಬಂದಿದೆ.ಆದರೆ ಬೆಳೆಯುವ ಜನಸಂಖ್ಯೆ ಹಾಗೂ ಆರ್ಥಿಕ ಸ್ಥಿತಿಗೆ ಪ್ರೋತ್ಸಾಹ ನೀಡಲು ಪ್ರತ್ಯೇಕವಾಗಿ ನಾರಾವಿ ಪೇಟೆಗೆ ಬೇಕಾದಷ್ಟು ಆರ್ಥಿಕ ಸಂಸ್ಥೆಗಳು ಇದ್ದು ಇದೀಗ ನಾರಾವಿ ಶಾಖೆ ಪ್ರಾರಂಭಿಸಲು ಉದ್ದೇಶಿಸಿದ್ದು ಇಂದು ಇದರ ಉದ್ಘಾಟನಾ ಸಮಾರಂಭ ನಡೆಯಿತು.
ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘ (ನಿ) ದ.ಕ. ಜಿ ಸಂಘವು 46.05 ಕೋಟಿ ಠೇವಣಿ, 35.08 ಕೋಟಿ ಮುಂಗಡಗಳು ಹಾಗೂ 86 ಕೋಟಿ ಪಾಲು ಬಂಡವಾಳವನ್ನು ಹೊಂದಿರುತ್ತದೆ.ದುಡಿಯುವ ಬಂಡವಾಳ 52.78 ಕೋಟಿ ರೂಪಾಯಿಗಳು. ಸಂಸ್ಥೆಯು ಸುಮಾರು 6835 ಸದಸ್ಯರನ್ನು ಹೊಂದಿರುವ ಒಂದು ಬೃಹತ್ ಸಂಸ್ಥೆಯಾಗಿದೆ. ಈ ಸಂಸ್ಥೆಯು ಪ್ರಾರಂಭವಾದ 15 ವರ್ಷಗಳಿಂದಲೂ ಲಾಭದಲ್ಲಿದ್ದು, ಪ್ರತೀ ವರ್ಷ ತಪ್ಪದೆ ಪಾಲು ಮುನಾಫೆ (ಲಾಭಾಂಶ) ವಿತರಿಸುತ್ತಾ ಬಂದಿದೆ.2021-22ನೇ ವರ್ಷಕ್ಕೆ ಶೇಕಡ 14 ಪಾಲು ಮುನಾಪೆಯನ್ನು ಹಂಚಿದ್ದು ಗುರುವಾಯನಕೆರೆಯಲ್ಲಿ ಸ್ವಂತ ಕಟ್ಟಡ “ವಿಕಾಸ ಸದನ” ಸುಮಾರು 2.35 ಕೋಟಿ ವೆಚ್ಚದ ಬೃಹತ್ ವಾಣಿಜ್ಯ ಸಂಕೀರ್ಣವನ್ನು ಹೊಂದಿದೆ. ಅಲ್ಲದೇ ಕಕ್ಕಿಂಜೆ ಶಾಖೆಯು ಸುಮಾರು 33.00 ಲಕ್ಷ ರೂಪಾಯಿ ವೆಚ್ಚದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜೂ.12ರಂದು ತನ್ನ 4ನೇ ಶಾಖೆಯನ್ನು ನಾರಾವಿಯ – ಮರೋಡಿ ರೋಡಿನಲ್ಲಿರುವ ಮಧವನ ಆರ್ಕೇಡ್ ನಲ್ಲಿ ಶಾಖೆಯ ಉದ್ಘಾಟನಾ ಸಮಾರಂಭ ನಡೆಯಿತು.ನಾರಾವಿ ಸಂತ ಅಂತೋನಿ ಚರ್ಚ್ ನ ಧರ್ಮಗುರು ವ.ಫಾ.ವಲೇರಿಯನ್ ಫೆರ್ನಾಂಡಿಸ್ ಆಶೀರ್ವಚನ ನೆರವೇರಿಸಿದರು.
ಸಂಘದ ಅಧ್ಯಕ್ಷ ಎಲೋಸಿಯಸ್ ಡಿ’ಸೋಜ ದೀಪ ಬೆಳಗಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅಧ್ಯಕ್ಷತೆ ವಹಿಸಿದರು. ನಿವೃತ್ತ ಡಿ.ಎಫ್.ಓ., ಎನ್. ಗೋಪಾಲ ಪೂಜಾರಿ ಶಾಖೆಯನ್ನು ಉದ್ಘಾಟಿಸಿದರು.
ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ನಿರಂಜನ್ ಅಜ್ರಿ ರಾಮೆರಗುತ್ತು, ನಾರಾವಿ ಶ್ರೀ ವೇಣುಗೋಪಾಲ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಶ್ರೀನಿವಾಸ್ ವಿ.ಕಿಣಿ ಭದ್ರತಾ ಕೊಠಡಿ ಉದ್ಘಾಟನೆ ನೆರವೇರಿಸಿದರು.ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ ಕಂಪ್ಯೂಟರ್ ಉದ್ಘಾಟಿಸಿದರು.
ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು. ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಬೆಳ್ತಂಗಡಿ ಕ್ಯಾಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಹೆನ್ರಿ ಲೋಬೊ, ಮಡಂತ್ಯಾರು ಜೇನು ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಹೊಸಮನೆ, ಸೋಜಾ ಇಲೆಕ್ಟ್ರಾನಿಕ್ಸ್ ಮಾಲಕ ಆಲ್ಫೋನ್ಸ್ ಫ್ರಾಂಕೊ, ಡಾಕಯ್ಯ ಪೂಜಾರಿ, ನಿವೃತ್ತ ಶಿಕ್ಷಕ ಕರು ಫೆಲಿಕ್ಸ್ ಮತ್ತು ಲಿಡ್ವಿನ್, ಬೆಳ್ತಂಗಡಿ ಕ್ಯಾಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ಸಿಇಓ ಐವನ್ ಗೊನ್ಸಾಲ್ವಿಸ್, ನಾರಾವಿ ಶಾಖೆ ವ್ಯವಸ್ಥಾಪಕ ವಾಲ್ಟರ್ ಡಿಸೋಜ, ಉಪಾಧ್ಯಕ್ಷ ಯೋಗೀಶ್ ಪೈ, ನಿರ್ದೇಶಕರುಗಳಾದ ಎನ್.ಮೋಹನ್ ಹೆಗ್ಡೆ, ಒಲ್ವಿನ್ ಮೋನಿಸ್, ಬಿ. ದಿನೇಶ್ ನಾಯಕ್, ಗೋಪಿನಾಥ್ ನಾಯಕ್, ಅಂತೋನಿ ಪಾಯಿಸ್, ರಾಘವ ಶೆಟ್ಟಿ .ಕೆ, ಗ್ರೆಗೋರಿ ಡಿಮೆಲ್ಲೋ, ಪ್ರವೀಣ್ ಚಂದ್ರ ಮೇಹೆಂದೆಲೆ, ಪ್ರವೀಣ್ ಕುಮಾರ್ ಹೆಚ್.ಎಸ್, ಜಗದೀಶ್, ಶೇಖರ ನಾಯ್ಕ, ಶ್ರೀಮತಿ ಮಮತಾ .ಎಂ ಶೆಟ್ಟಿ, ಶ್ರೀಮತಿ ಪ್ರೇಮಾವತಿ ಭಟ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ರೋಹಿತ್, ಅನಿತಾ ಹಾಗೂ ಸಿಬ್ಬಂದಿ ವರ್ಗದವರು, ಗಣ್ಯರು ಅಭಿಮಾನಿ ಬಳಗ ಉಪಸ್ಥಿತರಿದ್ದರು.ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.