


ಧರ್ಮಸ್ಥಳ: ಶ್ರೀ ಮಂ.ಅನುದಾನಿತ ಪ್ರೌಢಶಾಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಕಾರ್ಯಕ್ರಮ ಮುಖ್ಯೋಪಾಧ್ಯಾಯ ಎನ್.ಪದ್ಮರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಶಾಲಾ ಶಿಕ್ಷಕ ಲಿಂಗಪ್ಪ ಗೌಡ ಪಿ.ಎನ್. ಅವರು ವಿದ್ಯಾರ್ಥಿಗಳಿಗೆ ದಿನಾಚರಣೆಯ ಮಹತ್ವ ಹಾಗೂ ಸರ್ಕಾರ ಕೈಗೊಂಡ ಕಾನೂನು ಕಾರ್ಯಕ್ರಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.








