ಕವಿಗೋಷ್ಠಿಯಲ್ಲಿ ಬೆಳಾಲು ಪ್ರೌಢಶಾಲಾ ವಿದ್ಯಾರ್ಥಿಗಳು

0

ಬೆಳಾಲು: ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಇದರ ಬೆಳ್ತಂಗಡಿ ತಾಲೂಕು ಘಟಕದ ಪದಾಧಿಕಾರಿಗಳ ಘೋಷಣೆ ಮತ್ತು ಕವಿಗೋಷ್ಠಿಯು ಜರಗಿತು.

ಈ ಕಾರ್ಯಕ್ರಮದಲ್ಲಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ಅಮೂಲ್ಯ, ದಿಯಾ, ಕೀರ್ತನಾ, ಮನೋಜ್, ತೀರ್ಥೇಶ, ಪದ್ಮಿನಿ, ಸುಕನ್ಯಾ, ಲಿಖಿತಾ, ಶರಣ್ಯ ಮತ್ತು ಒಂಬತ್ತನೇ ತರಗತಿಯ ಸಮೀಕ್ಷಾ, ದೀಕ್ಷಿತಾ, ಯೋಗಿತಾ ಇವರು ಭಾಗವಹಿಸಿ ತಮ್ಮ ಸ್ವರಚಿತ ಕವನವನ್ನು ವಾಚಿಸಿದರು.

ಪರಿಸರ ಸಂರಕ್ಷಣೆಯ ವಿಷಯಾಧಾರಿತ ಕವನಗಳಿಗೆ ವಾಚನಕ್ಕೆ ಅವಕಾಶವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನೀಡಿತ್ತು. ವಿದ್ಯಾರ್ಥಿಗಳ ಕವನ ರಚನೆ ಮತ್ತು ವಾಚನಕ್ಕೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here