ಕನ್ಯಾಡಿ-1 ಸ.ಉ.ಹಿ.ಪ್ರಾ.ಶಾಲೆಯಲ್ಲಿ ಪಾಲಕರ ಸಭೆ ಹಾಗೂ ಉಚಿತ ನೋಟ್ ಬುಕ್ ವಿತರಣಾ ಸಮಾರಂಭ

0

ಕನ್ಯಾಡಿ-1: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-1 ಇಲ್ಲಿ 2023-24 ನೇ ಸಾಲಿನ ಪ್ರಥಮ ಪಾಲಕರ ಸಭೆಯು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ನೋಣಯ್ಯ ಗೌಡ ವಹಿಸಿದ್ದರು.ಸಭೆಯಲ್ಲಿ ಉಪಾಧ್ಯಕ್ಷೆ ಉಮಾವತಿ, ಪಂಚಾಯತ್ ಸದಸ್ಯರಾದ ಜಯ ಶೆಟ್ಟಿ ಹಾಗೂ ಸುಮಿತ್ರಾ, ಮುಖ್ಯೋಪಾಧ್ಯಾಯರಾದ ಹನುಮಂತ ರಾಯ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಮುಖವಾಗಿ ಹಿಂದಿನ ವರ್ಷದ ಸಾಧನೆಗಳು, ಹಾಗೂ ಶಾಲೆಯಲ್ಲಿ ಹಮ್ಮಿಕೊಂಡಂತಹ ವಿನೂತನ ಕಾರ್ಯಕ್ರಮಗಳ ಬಗ್ಗೆ ಪಾಲಕರು ಮೆಚ್ಚುಗೆಯ ಮಾತುಗಳನ್ನಾಡಿದರು. ಹಾಗೂ ಪ್ರಸ್ತುತ ವರ್ಷ ಹಮ್ಮಿಕೊಳ್ಳಬಹುದಾದ ವಿವಿಧ ಕಾರ್ಯಕ್ರಮಗಳು ಹಾಗೂ ಶಾಲೆಯಲ್ಲಿ ಕೆಲವೊಂದು ಭೌತಿಕ ವಸ್ತುಗಳನ್ನು ದಾನಿಗಳ ಸಹಕಾರದಿಂದ ಪಡೆದುಕೊಳ್ಳುವ ಬಗ್ಗೆ, ಮುಂದಿನ ವರ್ಷದಿಂದ ಮಕ್ಕಳ ದಾಖಲಾತಿ ಹೆಚ್ಚಳದ ಬಗ್ಗೆ, ಈಗಾಗಲೇ ನೀಡುತ್ತಿರುವ ಗುಣಾತ್ಮಕ ಶಿಕ್ಷಣವನ್ನು ಇನ್ನೂ ಹೆಚ್ಚಿಸುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.ಸಭೆಯಲ್ಲಿ ಸೇರಿದ್ದ ಸುಮಾರು 35 ಪಾಲಕರು ಆಗಮಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ನಂತರ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸುರ್ಯದ ಸುರೇಶ್ ಹೆಬ್ಬಾರ್ ಇವರು ಉಚಿತವಾಗಿ ನಾಲ್ಕು ನೋಟ್ ಬುಕ್ ಹಾಗೂ ಎರಡು ಕಾಫಿ ಪುಸ್ತಕಗಳನ್ನು ನೀಡಿದರು.ಇದನ್ನು ಸಭೆಯಲ್ಲಿ ಹಾಜರಿದ್ದ ಗಣ್ಯರು ಒಂದನೇ ತರಗತಿಯ ಮಕ್ಕಳಿಗೆ ಸಾಂಕೇತಿಕವಾಗಿ ನೀಡುವ ಮೂಲಕ ಚಾಲನೆ ನೀಡಿದರು.ಹಾಗೂ ಸುರೇಶ ಹೆಬ್ಬಾರ್ ಇವರಿಗೆ ಶಾಲೆಯ ಪರವಾಗಿ ಅನಂತ ಕೃತಜ್ಞತೆಗಳು.
ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಚುನಾವಣೆಯ ನೋಣಯ್ಯ ಗೌಡ ಇವರು ಎಲ್ಲರೂ ಸೇರಿಕೊಂಡು ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚು ಮಾಡುವ ಮೂಲಕ ಇನ್ನೂ ಹೆಚ್ಚಿನ ಶಿಕ್ಷಕರು ಕರ್ತವ್ಯ ನಿರ್ವಹಿಸುವ ಹಾಗೆ ಮಾಡಬೇಕೆಂದು ಕರೆಕೊಟ್ಟರು.
ಸಭೆಗೆ ಆಗಮಿಸಿದ್ದ ಸರ್ವರನ್ನು ಮುಖ್ಯೋಪಾಧ್ಯಾಯರಾದ ಹನುಮಂತರಾಯ ಇವರು ಸ್ವಾಗತಿಸಿದರು.ನಿಶ್ಮಿತಾ ಇವರು ಆಗಮಿಸಿದ್ದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಮೀಳಾ ಹಾಗೂ ಲೋಕೇಶ್ವರಿ ಇವರು ಸಹಕರಿಸಿದರು.ಹಾಗೂ ವಿಕಾಸ್ ಕುಮಾರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

p>

LEAVE A REPLY

Please enter your comment!
Please enter your name here