ಸೋಜಾ ಇಲೆಕ್ಟ್ರಾನಿಕ್ಸ್ ನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ 28ನೇ ವರ್ಷದ ಸಂಭ್ರಮಾಚರಣೆಯಲ್ಲಿ ಇರುವ ಈ ಸಂದರ್ಭದಲ್ಲಿ ಇವರ ವತಿಯಿಂದ ತಾಲೂಕಿನ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜೂ.10ರಂದು ನಡೆಯಿತು.

ಸಮಾರಂಭಕ್ಕೆ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಕೊಯ್ಯೂರು, ಗುರುವಾಯನಕೆರೆ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಜಗನ್ನಾಥ್, ವಿಕಾಸ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಎಲೋಸಿಯಸ್ ಡಿ’ಸೋಜಾ, ಸಂಸ್ಥೆಯ ಆಡಳಿತ ಪಾಲುದಾರರಾದ ಅಲ್ಫೋನ್ಸೋ ಫ್ರಾಕೋ, ಮ್ಯಾನೇಜರ್ ಲ್ಯಾನ್ಸಿ ಡಿ’ಸೋಜಾ, ಇಂಜಿನಿಯರ್ ರಾಹುಲ್ ಪಿ., ಆಡಳಿತ ನಿರ್ದೇಶಕ ಅಲ್ಫೋನ್ಸೋ ಫ್ರಾಕೋ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಬ್ಬಂದಿ ರಮೇಶ್ ಸ್ವಾಗತಿಸಿದರು. ಹಸೀನಾ ಸನ್ಮಾನಿತರ ಪರಿಚಯ ಮಾಡಿದರು.ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.ಸುಶ್ಮಿತಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here