ಹಿರಿಯ ಸಾಹಿತಿ ಎನ್.ಜಿ.ಪಟವರ್ಧನ್ ಅವರ ಕೃತಿ ‘ಆಟ’ ಲೋಕಾರ್ಪಣೆ

0

ಬೆಳ್ತಂಗಡಿ: ಪ್ರಖ್ಯಾತ ಹಿರಿಯ ಸಾಹಿತಿ ಪ್ರೊಫೆಸರ್ ಎನ್.ಜಿ.ಪಟವರ್ಧನ್ ಅವರ ಕಾದಂಬರಿ ‘ಆಟ’ ಇದನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ್ ಹೆಗ್ಡೆ ಅವರು ಲೋಕಾರ್ಪಣೆಗೊಳಿಸಿದರು.
ಕ್ರಿಕೆಟ್ ಜಗತ್ತಿನ ಸಂಗತಿಗಳನ್ನು ಬಳಸಿಕೊಂಡು ಬದುಕಿನ ಆಟವನ್ನು ಕಥನವನ್ನಾಗಿ ಪ್ರಯೋಗ ಮಾಡಿರುವ ಈ ಕಾದಂಬರಿಯಲ್ಲಿ ಪ್ರೊ.ಎನ್.ಜಿ.ಪಟವರ್ಧನ್ ಅವರ ಉತ್ಸಾಹ ಮತ್ತು ಸೃಜನಶೀಲತೆಯ ಅಭಿವ್ಯಕ್ತಿಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ಪ್ರಾಂಶುಪಾಲರು ಅನಿಸಿಕೆ ವ್ಯಕ್ತಪಡಿಸಿದರು.


ತಾವು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಾಲೇಜಿನ ಈ ಕೃತಿ ಬಿಡುಗಡೆಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರೊ.ಎನ್.ಜಿ.ಪಟವರ್ಧನ್ ಅವರು ಕ್ರಿಕೆಟ್ ನೊಂದಿಗೆ ತಮ್ಮ ಒಡನಾಟ ಮತ್ತು ಅದರ ಅನುಭವ ಮುಖೇನ ಕಾದಂಬರಿಯನ್ನು ವಿರಚಿಸಿದ ರೀತಿಯನ್ನು ವಿವರಿಸಿ ಕೃತಿ ಅನಾವರಣಗೊಳಿಸಲು ಅವಕಾಶ ನೀಡಿದ್ದಕ್ಕಾಗಿ ಕಾಲೇಜಿಗೆ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಂಪಿ ಶ್ರೀನಾಥ್ ಅವರು ನಿರೂಪಿಸಿ, ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಡಾ.ಕಿಶೋರ್ ಪಟವರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ದಿವ ಕೊಕ್ಕಡ ವಂದಿಸಿದರು.
ಪಟವರ್ಧನ್ ಅವರ ಕುಟುಂಬ ಸದಸ್ಯರು , ಕಾಲೇಜಿನ ಹಿರಿಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here