SKSSF ಬೊಳ್ಮನಾರ್ ಶಾಖೆಯ ವತಿಯಿಂದ ಕೆಮ್ಮಟೆ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮ ಸಮಸ್ತ ಧಾರ್ಮಿಕ ವಿದ್ಯಾರ್ಥಿ ಸಂಘಟನೆಯಾದ SKSSF ಬೊಳ್ಮನಾರ್ ಶಾಖೆಯ ವತಿಯಿಂದ ಕೆಮ್ಮಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕೆಮ್ಮಟೆ ಶಾಲೆಯಲ್ಲಿ SKSSF ಬೊಳ್ಮಿನಾರ್ ಶಾಖೆ ಅಧ್ಯಕ್ಷರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬೂಬಕರ್ ಕುಂಟ್ಯಾನ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ SKSSF ಕರ್ನಾಟಕ ರಾಜ್ಯ ಸಮಿತಿ ಸದಸ್ಯ ನಝೀರ್ ಅಝ್ಹರಿಯವರು ಸಂಘಟನೆಯ ಧ್ಯೇಯ ಉದ್ದೇಶಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.ಪುದುವೆಟ್ಟು ಗ್ರಾಮ ಪಂಚಾಯತ್ ಸದಸ್ಯ ರಾಮೇಂದ್ರನ್ ಮೇರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಘಟನೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಶಿಲ್ಪಾ ವಿಧ್ಯಾರ್ಥಿಗಳಿಗಾಗಿ ಉಚಿತ ಪುಸ್ತಕ ವಿತರಿಸಿದ ಕಾರ್ಯವನ್ನು ಶ್ಲಾಘಿಸುತ್ತಾ ಸಂಘಟಕರಿಗೆ ಸ್ವಾಗತಿಸಿ ಅಭಿನಂದಿಸಿದರು.ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಫೂರ್ ಬೊಳ್ಮನಾರ್, ಮಾಜಿ ಉಪಾಧ್ಯಕ್ಷ ಬೊಮ್ಮಣ್ಣ ಗೌಡ, ಸಮಾಜ ಸೇವಕರಾದ ಶಶಿ ಕರಂಬಾರ್ ಸಂಘಟನೆ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಪಂಚಾಯತ್ ಸದಸ್ಯ ನಾರಾಯಣ ಪಿಲಿಕ್ಕಳ, ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಬಾಲಕೃಷ್ಣ, ಊರಿನ ಹಿರಿಯರಾದ ಕೂಸಪ್ಪ ಗೌಡ, ಶಾಖೆಯ ಉಪಾಧ್ಯಕ್ಷ ರಫೀಖ್ ಅಲಪ್ಪಾಯ, ಕೋಶಾಧಿಕಾರಿ ಬಶೀರ್ ಅಲಪ್ಪಾಯ, ಸದಸ್ಯ ಬಶೀರ್ ಕಾಪಾಯ, ಹಳೇ ವಿದ್ಯಾರ್ಥಿ ಸಂಘದ ಸದಸ್ಯರಾದ ಸುರೇಶ್ ಕುಂಟ್ಯಾಣ, ರಹಿಮಾನ್ ಅಲಪ್ಪಾಯ ಅತಿಥಿಗಳಾಗಿ ಭಾಗವಹಿಸಿದರು.

ಶಾಲಾ ಶಿಕ್ಷಕಿ ಪ್ರೀತಿಕುಮಾರಿ, ಅಶ್ವಿನಿ, ಪವಿತ್ರ ಇತರ ಪೋಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್.ಕೆ.ಎಸ್.ಎಸ್.ಎಫ್ ಶಾಖೆಯ ಸಂಘಟನಾ ಕಾರ್ಯದರ್ಶಿ ರಹೀಂ ಮಖ್ದೂಮಿ ಅಬೀರಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿಧ್ಯಾರ್ಥಿಗಳಿಗೆ ಉಪದೇಶವಿತ್ತರು.ನಂತರ ವಿಧ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಸ್ಲೇಟು ಮತ್ತು ಬರಹ ಕಡ್ಡಿಗಳನ್ನು ವಿತರಿಸಲಾಯಿತು.ಎಸ್.ಕೆ.ಎಸ್.ಎಸ್.ಎಫ್ ಶಾಖಾ ಕಾರ್ಯದರ್ಶಿ ಸಿಧ್ಧೀಖ್ ಅಲಪ್ಪಾಯ ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ,ಪಾನಿಯ ವಿತರಿಸಲಾಯಿತು.

LEAVE A REPLY

Please enter your comment!
Please enter your name here