ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ವಸತಿ ಕಾಲೇಜು ಪ್ರಥಮ ತರಗತಿಗಳ ಪ್ರಾರಂಭೋತ್ಸವ

0

ಉಜಿರೆ: ಮಕ್ಕಳ ಬುದ್ಧಿಗೆ ಮಾತ್ರವಲ್ಲದೆ ಹೃದಯಕ್ಕೂ ಶಿಕ್ಷಣ ಸಿಗುವಂತಾಗಬೇಕು.ಸಕಾರಾತ್ಮಕ ದೃಷ್ಟಿಯಲ್ಲಿ ವಿದ್ಯಾರ್ಥಿಗಳು ಸುತ್ತನ ಜಗತ್ತನ್ನು ಕಂಡು ನೋಡುವಂತಾಗಬೇಕು, ತಮ್ಮನ್ನು ತಾವು ನಿಯಂತ್ರಿಸಿಕೊಂಡು ಪ್ರಯತ್ನಶೀಲತೆಯಲ್ಲಿ ಸಾಗಬೇಕು.ಅವಕಾಶಗಳು ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ರೀತಿಯಲ್ಲಿ ದೊರೆಯುವುದು ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗೆಯಲ್ಲಿ ಸಾಧನೆ ಸಿದ್ಧಿಯಾಗುವುದು,ಶಿಕ್ಷಣದೊಂದಿಗೆ ಸಂಸ್ಕಾರ ರೂಢಿಸಿಕೊಳ್ಳಿ ಎಂದು ಉಜಿರೆ ‘ನಿನಾದ’ದ ಶ್ರೀಮತಿ ಸೋನಿಯಾ ಯಶೋವರ್ಮ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪದವಿ ಪೂರ್ವ ತರಗತಿಗಳ ಪ್ರಾರಂಭೋತ್ಸವದಲ್ಲಿ ಆಯೋಜಿಸಿದ್ದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ‘ಶೈಕ್ಷಣಿಕ ಮಾಹಿತಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ಕಾಲೇಜಿನ ಪ್ರಾಚಾರ್ಯ ಸುನಿಲ್ ಪಂಡಿತ್ ಅವರು ಮಾತನಾಡಿ ಬಡ ಮತ್ತು ಮಧ್ಯಮ ವರ್ಗದವರು ಉತ್ಕೃಷ್ಟ ಶಿಕ್ಷಣ ಪಡೆಯಬೇಕು ಎಂಬುದು ಹೆಗ್ಗಡೆಯವರ ಕನಸು ಈ ನಿಟ್ಟಿನಲ್ಲಿ ವಸತಿ ಪದವಿ ಪೂರ್ವ ಕಾಲೇಜು ಆದರ್ಶವಾಗಿ ಮುನ್ನಡೆಯುತ್ತಿದೆ.ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯವರ್ಧನೆಗೂ ದಾರಿ ಮಾಡಿಕೊಟ್ಟಿದೆ ಮಕ್ಕಳಿಗೆ ದುಡ್ಡಿನ ಹಾಗೂ ಶ್ರಮದ ಬೆಲೆಯನ್ನು ಕಲಿಸಬೇಕಾದದ್ದು ಪೋಷಕರ ಜವಾಬ್ದಾರಿಯಾಗಿದೆ ಪೋಷಕರು ತಮ್ಮ ಮಕ್ಕಳಿಗೆ ಸಕಾರಾತ್ಮಕವಾಗಿ ಸಮಾಲೋಚನೆ ನಡೆಸುವ ಹಾಗೂ ಮುಕ್ತವಾಗಿ ಮಾತನಾಡುವ ಭಾವನೆಯನ್ನು ರೂಢಿಸಿಕೊಳ್ಳ ಬೇಕು ಎಂದರು .
ಗಣಿತಶಾಸ್ತ್ರದ ಉಪನ್ಯಾಸಕಿ ಪ್ರಿಯ ಎಮ್. ಹೆಚ್. ಬೋಧಕ – ಬೋಧಕೇತರ ಸಿಬ್ಬಂದಿಗಳ ಪರಿಚಯ ಮಾಡಿಕೊಟ್ಟು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

p>

LEAVE A REPLY

Please enter your comment!
Please enter your name here