



ಉಜಿರೆ: ಅನುಗ್ರಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯು ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋರವರ ಅಧ್ಯಕ್ಷತೆಯಲ್ಲಿ ಜರಗಿತು.


ಶಾಲಾ ಪ್ರಾರ್ಥನೆಯ ಬಳಿಕ ಶಾಲಾ ಮಕ್ಕಳಿಂದ ಪರಿಸರ ಗೀತೆಗಳನ್ನು ಹಾಡಿಸಲಾಯಿತು.ತದನಂತರ ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಕುರಿತು ಕುಮಾರಿ ಶ್ರೇಯಾ ಹಾಗೂ ನಕ್ಷಾ ಮಾತನಾಡಿದರು. ಸಾಂಕೇತಿಕವಾಗಿ ಗಿಡವನ್ನು ಪ್ರಾಂಶುಪಾಲರಿಗೆ ಅರ್ಪಿಸಲಾಯಿತು. ಪ್ರಾಂಶುಪಾಲರಾದ ವಿಜಯ್ ಲೋಬೋರವರು ಪರಿಸರ ಉಳಿಸಿ, ಬೆಳೆಸಿ ರಕ್ಷಿಸಬೇಕೆಂಬ ಸಂದೇಶವನ್ನು ನೀಡಿದರು.








