


ಮಚ್ಚಿನ: ಮಾನ್ಯ ಸತ್ಯಚಾವಡಿ ಕೋಟ್ಯಾನ್ ಬರಿಯ ತರವಾಡು ಮನೆಯ ಗೃಹಪ್ರವೇಶ, ಧರ್ಮ ದೈವಗಳ ಪುನಃರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಎ.30ರಿಂದ ಮೇ 3ರವರೆಗೆ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ನಡೆಯಿತು. ಮೇ 3ರಂದು ಗೃಹ ಪ್ರವೇಶ, ಪೀಠ ಪ್ರತಿಷ್ಠಾ, ದೈವಗಳ ಪ್ರತಿಷ್ಠೆ, ಕಲಾಶಾಭಿಷೇಕ, ದೈವಗಳಿಗೆ ತಂಬಿಲ ಮಹಾಪೂಜೆ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶಾ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಗುರುಕೃಪ ಉದ್ಯಮಿಗಳು ಬಿ.ಸಿ.ರೋಡ್ ನ ಸಂಜೀವ ಪೂಜಾರಿ,ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಕುಟುಂಬದ ಹಿರಿಯರಾದ ಸಂಜೀವ ಪೂಜಾರಿ ಮಾನ್ಯ, ಆಡಳಿತ ಮಂಡಳಿ ಗೌರವಾಧ್ಯಕ್ಷ ದಿನಕರ ಪೂಜಾರಿ ಕಡ್ತಿಲ, ಆಡಳಿತ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೋಜ ಬಂಗೇರ ಮಾನ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಸಿ.ಹೆಚ್. ಚಿಪ್ಲುಕೋಟೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ, ಕೋಶಾಧಿಕಾರಿ ಪೂರ್ಣಿಮಾ ಕೋಟ್ಯಾನ್, ಆಡಳಿತ ಮಂಡಳಿ ಕಾರ್ಯದರ್ಶಿ ವಿನಯಚಂದ್ರ ಜೆಂಕ್ಯಾರು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹೇಶ್ ಜೆಂಕ್ಯಾರು, ಬ್ರಹ್ಮಕಲಶೋತ್ಸವ ಮಹಾ ಪೋಷಕರು ಮತ್ತು ಆಡಳಿತ ಸಮಿತಿಯ ಉಪಾಧ್ಯಕ್ಷೆ ಪವಿತ್ರ ಕೋಟ್ಯಾನ್, ಆಡಳಿತ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದು ಸಹಕರಿಸಿದರು .

ಜೀರ್ಣೋದ್ದಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ ಸ್ವಾಗತಿಸಿ ರಾಜೇಶ್ ಕೋಟ್ಯಾನ್ ವಂದಿಸಿದರು. ಸ್ಮಿತೇಶ್ ಬಾರ್ಯ
ಕಾರ್ಯಕ್ರಮ ನಿರೂಪಿಸಿದರು.