ಪುಂಜಾಲಕಟ್ಟೆ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಉಚಿತ ಸಾಮೂಹಿಕ ವಿವಾಹ ಸಾಧಕರಿಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪುರಸ್ಕಾರ ಹಾಗೂ ಸ್ವಸ್ತಿ ಸಿರಿ ಸಂಭ್ರಮ ಪುರಸ್ಕಾರ ಎ.30ರಂದು ಪುಂಜಾಲಕಟ್ಟೆ ಕಟ್ಟೆ ಮೈದಾನದಲ್ಲಿ ಜರಗಿತು.
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 39ನೇ ವರ್ಷದ ಸಂಭ್ರಾಚರಣೆಯಲ್ಲಿ 15ನೇ ವರ್ಷದ ಸಾಮೂಹಿಕ ವಿವಾಹದಲ್ಲಿ 9ಜೋಡಿ ಸತಿಪತಿಗಳಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಸಾಧನೆ ಗೈದ ಸಾಧಕರೀಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಿತು.ಡಾ| ಸದಾನಂದ ಪೂಜಾರಿ (ವೈದ್ಯಕೀಯ ಕ್ಷೇತ್ರ), ವಿಜಯ್ ಕುಮಾರ್ ಕೋಡಿಯಾಲ್ ಬೈಲ್(ಕಲಾ ಕ್ಷೇತ್ರ), ಕಡಬ, ಶ್ರೀನಿವಾಸ ರೈ (ಯಕ್ಷಗಾನ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಹಾಗೂ ಪರಿಸರದ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗ್ಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರವಣಿಗೆ ನಡೆಯಿತು.ಕಾರ್ಯಕ್ರಮವನ್ನು ಸಂತೋಷ್ ಕುಮಾರ್ ಜೆ. ಪಿ. ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನೈಕ್ ವಹಿಸಿದ್ದರು.ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಶಸ್ತಿ ಪ್ರದಾನ ಮಾಡಿದ ರು. ಶಾಸಕ ಹರೀಶ್ ಪೂಂಜ ಅವರು ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಿದರು. ಗುತ್ತಿಗೆದಾರ ಪ್ರವೀಣ್ ಎಸ್. ದರ್ಬೆ ಅವರು ಮಂಗಳ ಸೂತ್ರ ವಿತರಿಸಿದರು.
ಬೆಳಗ್ಗೆ ಶ್ರೀ ಗೋಪಾಲಕೃಷ್ಣದೇವಸ್ಥಾನದ ಬಳಿಯಿಂದ ಪ್ರಸಿದ್ಧ ಕಲಾ ತಂಡಗಳ ಪ್ರದರ್ಶನದಲ್ಲಿ ವೈಭವದ ದಿಬ್ಬಣ ಮೆರವಣಿಗೆ,ದಿಬ್ಬಣಕ್ಕೆ ಚಾಲನೆಯನ್ನು ಸುದರ್ಶನ್ ಬಜ ಪ್ರ.ಕಾರ್ಯದರ್ಶಿ, ದ.ಕ.ಜಿಲ್ಲಾ ಬಿಜೆಪಿಯುವಮೋರ್ಚಾ, ಹರೀಂದ್ರ ಪೈ, ಉದ್ಯಮಿಗಳು, ನಯನಾಡು.ಲಕ್ಷ್ಮೀನಾರಾಯಣ ಉಡುಪ, ಅಧ್ಯಕ್ಷರು, ಪಿಲಾತಬೆಟ್ಟು ವ್ಯ.ಸೇ.ಸ.ಸಂಘ, ಪುಂಜಾಲಕಟ್ಟೆ ಪುನೀತ್ ಕುಮಾರ್,ಗ್ರಾ.ಪಂ.ಸದಸ್ಯರು, ಮಾಲಾಡಿ,ಕರುಣಾಕರ ಪೂಜಾರಿ,ಮಾಳಿಗೆಮನೆ, ಕಜೆಕಾರು ಲಕ್ಷ್ಮೀ ನಾರಾಯಣ ಹೆಗ್ಡೆ,ಗ್ರಾಮ ಪಂಚಾಯತ್ ಉಪಾಧ್ಯಕ್ಷರು,ಪಿಲಾತಬೆಟ್ಟು ಹರೀಶ್ ಪ್ರಭು,ಪ್ರ.ಕಾರ್ಯದರ್ಶಿ, ಬಿಜೆಪಿ ನಾವೂರ ಶಕ್ತಿಕೇಂದ್ರ ರಮೇಶ್ ಶೆಟ್ಟಿ ಮಜಲೋಡಿ,ಅಧ್ಯಕ್ಷರು, ತುಳುನಾಡ ರಕ್ಷಣಾ ವೇದಿಕೆ, ಬಂಟ್ವಾಳ ಘಟಕ,ಗೌರವ ಉಪಸ್ಥಿತಿ ಜೋಸೆಫ್ಎನ್.ಎಂ.,ಪ್ರಾಂಶುಪಾಲರು, ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರು,ಮಾಜಿ ಸಚಿವರು ನಾಗರಾಜ ಶೆಟ್ಟಿ, ಉದಯ ಕುಮಾರ್ ಕಟ್ಟೆಮನೆ ಮತ್ತು ಸಹೋದರರು ಡಾ.ಜಯಪ್ರಕಾಶ್, ರಾ.ಸ್ವಸೇ.ಸಂಘ, ದಕ್ಷಿಣ ಪ್ರಾಂತೀಯಕಾರ್ಯವಾಹಅಬ್ದುಲ್ ಕುಂಞ, ಮಾಲಕರು ಎನ್.ಎಸ್.ಕ್ರಶರ್ ಮಾವಿನಕಟ್ಟೆ, ಸುನಿಲ್ ಹೆಳವ ಕಡೂರು, ಸದಸ್ಯರು, ಕನ್ನಡ ಸಾಹಿತ್ಯ ರಾಜ್ಯಪರಿಷತ್ದೇವಪ್ಪ ಪೂಜಾರಿ, ಅಧ್ಯಕ್ಷರು, ಬಂಟ್ವಾಳ ಬಿಜೆಪಿ ರಮೇಶ್ ಕುಡುಮೇರು, ತಾ.ಪಂ.ಮಾಜಿ ಸದಸ್ಯರು,ಶ್ರೀಮತಿ ಗಾಯತ್ರಿ ಕಂಬಳಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ, ಬಂಟ್ವಾಳಶ್ರಿಮತಿ ಬಬಿತಾ ದಿನೇಶ್,ಪ್ರಬಂಧಕರು, ಪಿಲಾತಬೆಟ್ಟು ವ್ಯ.ಸೇ.ಸ.ಸಂಘ,ಶ್ರೀಮತಿ ಹರ್ಷಿಣಿ ಪುಷ್ಪಾನಂದ, ಗ್ರಾ.ಪಂ.ಅಧ್ಯಕ್ಷರು, ಪಿಲಾತಬೆಟ್ಟು ಮಾಧವ ಮಾವೆ,ಮಾಜಿ ಅಧ್ಯಕ್ಷರು, ಬಂಟ್ವಾಳ ತಾ.ಪಂ.ಸ್ಥಾಯಿ ಸಮಿತಿ ಶ್ರೀ ಮಂಜುನಾಥ್ ಬನ್ನೂರು, ಉದ್ಯಮಿಗಳು ಮುಂಬಯಿ ಲೋಕೇಶ್ ಆಚಾರ್ಯ,ಮಾಲಕರು,ಸಾವಿತ್ರಿ ಜುವೆಲ್ಲರ್ ಪುಂಜಾಲಕಟ್ಟೆ, ಹೇಮಂತ್ ಕುಮಾರ್‌ಮಾಲಕರು ಹೇಮಾ ಗ್ರಾನೈಟ್ಸ್ ಮೂರ್ಜೆ, ಮಧ್ಯಾಹ್ನ 2ರಿಂದ ಪೆರ್ಡೂರು ಮೇಳದವರಿಂದ ಕುಶ ಲವ ಯಕ್ಷಗಾನ ಪ್ರದರ್ಶನವಿದೆ. ಸಂಜೆ ತಾಂಬೂಲ ಕಲಾವಿದರಿಂದ ಪರಿಮಳ ಕಾಲನಿ ತುಳುನಾಟಕ ನಡೆಯಲಿದೆ.ಕಬ್‌ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಸುಂದರ್ ರಾಜ್ ಹೆಗ್ಡೆ ಮುಂಬಯಿ, ರಾಜೇಶ್ ಪಿ. ಬಂಗೇರ, ರತ್ನಾಕರ, ಸಂತೋಷ್ ಕುಮಾರ್ ಜೆ.ಪಿ., ಅಬ್ದುಲ್ ಹಮೀದ್ , ಜಯರಾಜ್ ಅತ್ತಾಜೆ ಮೊದಲಾದವರು ಉಪಸ್ಥಿತರಿದ್ದರು.
ಎಂ ತುಂಗಪ್ಪ ಬಂಗೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.