


ಮಡಂತ್ಯಾರು: ಮಡಂತ್ಯಾರು ವಲಯದ ಜನಜಾಗೃತಿ ವೇದಿಕೆಯ ವಲಯ ಸಭೆಯನ್ನು ಎ.28ರಂದು ಗಣಪತಿ ಮಂಟಪ ಆವರಣ ಮಡಂತ್ಯಾರ್ ನಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ, ತಾಲೂಕು ವೇದಿಕೆ ಸದಸ್ಯರ ಆಯ್ಕೆ ಮಾಡಲಾಯಿತು. ಮತ್ತು ಜನಜಾಗೃತಿ ಮೂಲಕ ಆಯೋಜಿಸಲಾಗುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಲಯದ ಜನಜಾಗೃತಿ ಅಧ್ಯಕ್ಷರಾದ ಅಬ್ದುಲ್ ರಹಿಮನ್ ಪಡ್ಪು , ಮತ್ತು ತಾಲ್ಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಪುಷ್ಪರಾಜು ಜೈನ್, ಪದ್ಮನಾಭ ಸಾಲ್ಯಾನ್, ಪದ್ಮನಾಭ ಅಟಾಲ, ಶಿಬಿರಾಧಿಕಾರಿ ದಿನೇಶ್, ಮತ್ತು ಗ್ರಾಮ ಸಮಿತಿ ಅಧ್ಯಕ್ಷರುಗಳು, ಒಕ್ಕೂಟದ ಅಧ್ಯಕ್ಷರು, ನವಜೀವನ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.ವಲಯದ ನೂತನ ಅಧ್ಯಕ್ಷರಾಗಿ ಪದ್ಮನಾಭ ಸಾಲ್ಯಾನ್ ಆಯ್ಕೆಯಾದರು. ಮತ್ತು ತಾಲೂಕು ವೇದಿಕೆ ಜನಜಾಗೃತಿ ಸಮಿತಿ ಸದಸ್ಯರಾಗಿ ಕೃಷ್ಣಪ್ಪ ಮತ್ತು ಪ್ರವೀಣ್ ಶೆಟ್ಟಿಯವರು ಆಯ್ಕೆಯಾದರು.ಯೋಜನಾಧಿಕಾರಿಯಾದ ಯಶವಂತ.ಎಸ್ ಅವರು ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದ ನಿರೂಪಣೆಯನ್ನು ವಲಯ ಮೇಲ್ವಿಚಾರಕರು ವಸಂತ ಕುಮಾರ್ ನಡೆಸಿದರು.
ಪಾರೆಂಕಿ ಗ್ರಾಮದ ಸೇವಾ ಪ್ರತಿನಿಧಿ ಶ್ರೀಮತಿ ಶೋಭಾ ರವರು ಸ್ವಾಗತಿಸಿ, ಹಾಗೂ ಕುಕ್ಕಳ ಸೇವಾ ಪ್ರತಿನಿಧಿ ಸತೀಶ್ ಧನ್ಯವಾದವಿತ್ತರು.