


ಬೆಳ್ತಂಗಡಿ: ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಸಹೋದರಿ ಸ್ಪಂದನಾ ವಿಜಯ್ ರಾಘವೇಂದ್ರ ಚುನಾವಣಾ ಪ್ರಚಾರ ನಡೆಸಿದರು.

ಅಣ್ಣನ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ತಂಗಿ ಸ್ಪಂದನ ವಿಜಯ್ ರಾಘವೇಂದ್ರ ಕ್ಷೇತ್ರದ ಕುತ್ಲೂರು ಮಲೆ, ನಾರಾವಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ರಕ್ಷಿತ್ ಶಿವರಾಂ ಅವರಂತಯೇ ಮನೆ ಮನೆ ಪ್ರಚಾರ ಮಾಡಿ ಅಣ್ಣನಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.ಸ್ಪಂದನಾ ವಿಜಯ್ ರಾಘವೇಂದ್ರಗೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.