


ಮುಂಡಾಜೆ: ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಮುಂಡಾಜೆ ಇದರ ಆಶ್ರಯದಲ್ಲಿ ಮುಂಡಾಜೆ ಹೈಸ್ಕೂಲಿನಲ್ಲಿ ನಿವೃತ್ತ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಅಧ್ಯಾಪಕರಿಗೆ ಗುರುವಂದನೆ ಸಲ್ಲಿಸಲಾಯಿತು.
ಶಾಲೆಯ ಆರಂಭದಿಂದ ಅಧ್ಯಾಪಕರುಗಳಾಗಿದ್ದ ಶ್ರೀಯುತ ವೀರೇಶ್ವರ ವಿ ಫಡಕೆ, ರಾಧಾಕೃಷ್ಣ ಕೆ, ಸುಗುಣ ಎಸ್ ಭಟ್, ಬಾಬುಗೌಡ, ಪದ್ಮನಾಭ ಪಟವರ್ಧನ್, ಕೆ.ರಾಮ ಕಾರಂತ, ಚಂದ್ರಶೇಕರ.ಬಿ, ಶ್ರೀಮತಿ ದೇವಕಿ ಇವರನ್ನು ಗೌರವಿಸಲಾಯಿತು. ಸಮಾರಂಭದ ವಿಶೇಷ ಅಹ್ವಾನಿತರಾಗಿ ರೊ. ಮಚ್ಚಿಮಲೆ ಅನಂತ ಭಟ್ ಭಾಗವಹಿಸಿದ್ದರು.
ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು ಇಲ್ಲಿನ ಅಧ್ಯಕ್ಷರಾದ ಕಲ್ಲಡ್ಕ ಡಾಕ್ಟರ್ ಪ್ರಭಾಕರ ಭಟ್ ಮಾತನಾಡಿ ಶೈಕ್ಷಣಿಕ ವಿದ್ಯೆಯ ಜೊತೆಗೆ ನೈತಿಕ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ಹಾಗೂ ಹಿರಿಯ ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವ ಈ ಅಭೂತಪೂರ್ವ ಕಾರ್ಯಕ್ರಮದ ಬಗ್ಗೆ ಅಭಿನಂದನೆ ಸಲ್ಲಿಸಿದರು.ಈ ಶಾಲೆ ನಡೆದು ಬಂದ ದಾರಿಯ ಬಗ್ಗೆ ನಿವೃತ್ತ ಶಿಕ್ಷಕ ಕೆ.ರಾಧಾಕೃಷ್ಣರವರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದ ಉತ್ತಮ ಪ್ರಜೆಯಾಗಿ ಬಾಳುವುದು ನಮ್ಮೆಲ್ಲರ ಹೊಣೆ ಹಾಗೂ ಈ ಕೆಲಸವನ್ನು ಶಾಲಾ ಅಧ್ಯಾಪಕರುಗಳು ಮಾಡಬೇಕೆಂದು ಸಲಹೆ ನೀಡಿದರು.ಗುರುವಂದನೆ ಕಾರ್ಯಕ್ರಮದ ಮೂಲಕ ಹಿರಿಯ ವಿದ್ಯಾರ್ಥಿಗಳು ತೋರಿದ ಪ್ರೀತಿಗೆ ನಾವೆಲ್ಲ ಆಭಾರಿಗಳು ಎಂದು ಶ್ರೀ.ವೀರೇಶ್ವರ ವಿ.ಫಡ್ಕೆ ಹೇಳಿದರು.
ಸುಮಾರು 150 ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಕಜೆ ವೆಂಕಟೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ವಿದ್ಯಾರ್ಥಿ ಶ್ರೀಯುತ ನಾರಾಯಣ ಫಡಕೆ ಮತ್ತು ಜಯರಾಮ.ಕೆ ಕಾರ್ಯಕ್ರಮ ನಿರೂಪಿಸಿದರು.
ವಿವೇಕಾನಂದ ವಿದ್ಯಾ ಸಂಸ್ಥೆ ಮುಂಡಾಜೆ, ಇಲ್ಲಿಯ ಅಧ್ಯಕ್ಷರಾದ ಶ್ರೀಯತ ಕೆ. ವಿನಯಚಂದ್ರ ಉಪಸ್ಥಿತರಿದ್ದರು.