ಕುವೆಟ್ಟು: ಎ.10ರಂದು ಸ.ಪ್ರ.ದ.ಕಾಲೇಜು ಬೆಳ್ತಂಗಡಿಯ 2022-23ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದ.ಕ.ಜಿ.ಪಂ ಉ.ಹಿರಿಯ ಪ್ರಾಥಮಿಕ ಶಾಲೆ ಕುವೆಟ್ಟುವಿನಲ್ಲಿ ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರವರು ಉದ್ಘಾಟಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಶಿಬಿರಾರ್ಥಿಗಳು ತಮ್ಮನ್ನು ಉತ್ತಮ ರೀತಿಯಲ್ಲಿ ತೊಡಗಿಸಿ ಕೊಳ್ಳುವುದರ ಮೂಲಕ ತಮ್ಮ ಸರ್ವತೋಮುಕ ಬೆಳವಣಿಗೆಗೆ ಕಾರಣೀಭೂತರಾಗಬಹುದು ಎಂದರು.
ಕಾರ್ಯಕ್ರಮದ ಅಥಿತಿ ಮೋಹನ್ ಕುಮಾರ್ ಬಿ.ಆರ್.ಪಿ. ಮಾತನಾಡಿ ಎನ್ ಎಸ್ ಎಸ್ ನಿಂದ ವ್ಯಕ್ತಿತ್ವ ವಿಕಸನ ಹೊಂದಬಹುದು ಹಾಗೂ ಇದರಿಂದ ಬುದ್ಧಿ ಮತ್ತು ಕೌಶಲ್ಯ ಅಭಿವೃದ್ಧಿಗಳಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಸುಬ್ರಹ್ಮಣ್ಯ ಕೆ. ಪ್ರಾಚಾರ್ಯ ಸ.ಪ್ರ.ದ.ಕಾಲೇಜು ಬೆಳ್ತಂಗಡಿ ಮಾತನಾಡಿ ಎನ್ ಎಸ್ ಎಸ್ ನಲ್ಲಿ ತೊಡಗಿಸಿ ಕೊಳ್ಳುವುದರ ಮೂಲಕ ನಾನು ಹೋಗಿ ನಾನಗಬಹುದು ಆಗೆಯೇ ಸಮಾಜದಲ್ಲಿ ಉತ್ತಮ ಪ್ರಜೆಯಾಗಬಹುದು.ಎಂದು ನುಡಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ,ಘಟಕ-1 ಪ್ರೊ ರೊನಾಲ್ಡ್ ಪ್ರವೀಣ್ ಕೊರೆಯಾ ಮಾತನಾಡಿ ಮಹಾತ್ಮಾಗಾಂಧಿಯ ಗ್ರಾಮ ಸ್ವರಾಜ್ಯ ಕಲ್ಪನೆಯ ಕನಸನ್ನು ನನಸಾಗಿಸಲು ಎನ್ ಎಸ್ ಎಸ್ ನಿಂದ ಸಾಧ್ಯ,ಉತ್ತಮ ನಾಯಕತ್ವ ಗುಣ ಮತ್ತು ವ್ಯಕ್ತಿತ್ವ ವಿಕಸನ
ಹೊಂದಲು ಸಹಕಾರಿ ಎಂದು ಪ್ರಾಸ್ತಾವಿಕವಾಗಿ ಹೇಳಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಘಟಕ-2 ಪ್ರೋ.ಕವಿತಾ, ಸಹಶಿಬಿರಾಧಿಕಾರಿ,ಆಂಗ್ಲ ಭಾಷಾ ಉಪನ್ಯಾಸಕ ಸುರೇಶ್ ಡಿ, ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ ಸುರೇಶ್ ವಿ. ಶಾಲಾ ಬೋಧಕ ವೃಂದವರಾದ ದೈಹಿಕ ಶಿಕ್ಷಣದ ಶಿಕ್ಷಕಿ ಪೂರ್ಣಿಮಾ ಬಿ, ಸಹ ಶಿಕ್ಷಕಿಗಳಾದ ಫಿಲೋಮಿನಾ ಲೋಬೋ, ಧವಳಾ ಎ, ಪ್ರಮಿಳಾ, ಟಿ.ಜಿ.ಟಿ.ಶಿಕ್ಷಕ ಸುರೇಶ್ ಶೆಟ್ಟಿ, ಜಿ.ಪಿ.ಟಿ ಶಿಕ್ಷಕಿ ಶಶಿಕಲಾ, ಅತಿಥಿ ಶಿಕ್ಷಕಿ ಕು ಸರ್ವಿನ್ ಫಾತಿಮಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಉಪಸ್ಥಿತರಿದ್ದರು. ಒಟ್ಟು ನೂರು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕು.ಜಿವಿತಾ ಮತ್ತು ತಂಡ ಪ್ರಾರ್ಥಿಸಿ, ಕು. ವೀಣಾ ವಂದಿಸಿ , ಕು.ವಿನುತಾ ನಿರೂಪಿಸಿದರು.