ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

0

ಶಿಶಿಲ: ಕರ್ಮ ಭೂಮಿ, ಜ್ಞಾನ ಭೂಮಿಯಲ್ಲಿ ಭಗವಂತನ ಅವತಾರವಾಯಿತು.ಭಗವಂತ ಭಕ್ತರ ನಂಬಿಕೆಯಲ್ಲಿ ವಾಸಿಸುತ್ತಾನೆ.ಅಂತಹ ಭಗವಂತ ಶ್ರೀರಾಮ ಸೇವಕ ಹನುಮಂತ.
ಎಲ್ಲಿ‌ ರಾಮನೊ ಅಲ್ಲಿ ಹನುಮ.ಎಲ್ಲಿ ಹನುಮನೋ ಅಲ್ಲಿ ರಾಮ.ಕಪಿಗಳು ರಾಮ ನಾಮದಿಂದ ಉದ್ದಾರವಾದವು.ಸ್ವಾಮಿ ಭಕ್ತಿಗೆ ಹನುಮಂತ ಉತ್ತಮ ಉದಾಹರಣೆ.ಜೀವನ ಸಾಗರವನ್ನು ದಾಟಲು ಹನುಮ ಸ್ಮರಣೆ ಪೂರಕ.ಅಂತಹ ಶಕ್ತಿಯನ್ನು ನಾವೆಲ್ಲಾ ಈದಿನ ಭಕ್ತಿಯಿಂದ ಸ್ಮರಿಸುತ್ತಿದ್ದೇವೆ ಎಂದು ಹಿರಿಯ ವಿದ್ವಾಂಸರೂ, ಜ್ಯೋತಿಷಿ ದಾವಣಗೆರೆಯ ವೆ.ಬ್ರಹ್ಮ ಶ್ರೀ ರಾಘವೇಂದ್ರ ಆಚಾರ್ಯ ನುಡಿದರು.
ಶಿಶಿಲ ಶಿವಕೀರ್ತಿನಿಲಯದಲ್ಲಿ ನಡೆದ ಹನೂಮ ಜಯಂತಿ ಆಚರಣೆಯಲ್ಲಿ ಅವರು ಅಶೀರ್ವಚನ ನೀಡಿದ್ದರು.

ಕಾರ್ಯಕ್ರಮ ಉದ್ಘಾಟನೆಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆಡಳಿತ‌ ಮಂಡಳಿ ಸದಸ್ಯ ಶೇಖರ ನಾರಾವಿ ಉದ್ಘಾಟಿಸಿ, ಮಕ್ಕಳಲ್ಲಿ ಧಾರ್ಮಿಕ ಭಾವನೆ ಮೂಡುವಲ್ಲಿ ಭಜನೆ ಪೂರಕ ಎಂದರು.
ಮುಖ್ಯ ಅಥಿತಿಗಳಾಗಿ ವಿಪ್ರ ಸಮೂಹ ಸಂಸ್ಥೆ ಬೆಂಗಳೂರಿನ ನಿರ್ದೇಶಕ ರಾಘವೇಂದ್ರ ಆಶಯ ನುಡಿಗಳನ್ನು ನುಡಿದರು.


ಮುಖ್ಯ ಅತಿಥಿಯಾಗಿ ರಾಘವೇಂದ್ರ ಕಿಗ್ಗ, ಶ್ರೀನಿವಾಸ ಮೂಡೆತ್ತಾಯ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಭಜನಾ ತರಬೇತಿದಾರ ರಾಮಕೃಷ್ಣ ಕಾಟುಕುಕ್ಕೆ ದಂಪತಿಯನ್ನು ಜಯರಾಮ ನೆಲ್ಲಿತ್ತಾಯರ ಮನೆವತಿಯಿಂದ ಸನ್ಮಾನಿಸಲಾಯಿತು.


ಬಿಳಿನೆಲೆ ಗೋಪಾಲ ಕೃಷ್ಣ ಮಹಿಳಾ ಮತ್ತು ಪುರುಷ ಭಜನಾ ಮಂಡಳಿ ಮತ್ತು ಅರಸಿನಮಕ್ಕಿ ಮಕ್ಕಳ ಭಜನಾ ಮಂಡಳಿಯ ಸದಸ್ಯರು ಆಕರ್ಷಕ ಕುಣಿತ ಭಜನೆ ನೆರವೇರಿಸಿದ್ದರು.
ಬಿ.ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿದರು.
ಶ್ರೀಮತಿ ಅಮಿತಾ ಧನಂಜಯ ಪ್ರಾರ್ಥಿಸಿ, ಶ್ರೀಮತಿ ನಾಗಮಣಿ ರವಿ ಅವರಿಂದ ಶಂಖ ನಾದದೊಂದಿಗೆ ಭಜನೆ ಪ್ರಾರಂಭವಾಯಿತು, ಸೋಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಪ್ರೀತಿಕಾ ಯಶಸ್ ವಂದಿಸಿದರು.ಭಜನೆ, ಹನುಮ ಪೂಜೆ, ರಾಮಾಯಣ ಗ್ರಂಥ ಪೂಜೆ, ಕುಣಿತ ಭಜನೆ ನೆರವೆರಿತ್ತು.

LEAVE A REPLY

Please enter your comment!
Please enter your name here