


ಬಂದಾರು: ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವವು ಪರಮಪೂಜ್ಯ ಬ್ರಹ್ಮಶ್ರೀ ನೀಲೇಶ್ವರ ತಂತ್ರಿಯವರ ಹಿರಿತನದಲ್ಲಿ ಪೂಜ್ಯ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜರುಗಲಿರುವುದು.
ಎ.2ರಂದು ಪ್ರತಿಷ್ಠಾ ಮಹೋತ್ಸವ ಮತ್ತು ಹೊರ ಕಾಣಿಕೆಯೊಂದಿಗೆ ಪ್ರಾರಂಭಗೊಂಡು ವೈದಿಕ ಕಾರ್ಯಕ್ರಮಗಳು, ವಿವಿಧ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮಗಳು ನೆರವೇರಲಿರುವುದು. ಎ.8ರಂದು ರಕ್ತೇಶ್ವರಿ ದೈವದ ನೇಮೋತ್ಸವ, ರಥೋತ್ಸವ ಮತ್ತು ಶಯನೋತ್ಸವ ನಡೆಯಲಿದೆ.
ಎ.9 ರಂದು ಕವಟೋದ್ಘಾಟನೆ ಮತ್ತು ಮಧ್ಯಾಹ್ನ ಮಹಾಪೂಜೆ ನೆರವೇರಲಿರುವುದು. ಅದೇ ದಿನ ರಾತ್ರಿ ಪಿಲಿಚಾಮುಂಡಿ ದೈವದ ನೇಮೋತ್ಸವ, ಶ್ರೀ ದೇವರ ಅವಭೃತ ಸ್ನಾನ, ಧ್ವಜ ಅವರೋಹಣ ನಡೆಯಲಿದೆ. ಸಂಜೆ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣರ ಆರ್ಶೀರ್ವಾದಗಳೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿರುವುದು.