ಸರಕಾರ ಜಾಗ ಮಂಜೂರಾತಿಯಲ್ಲಿ ಅನ್ಯಾಯ: ನಿವೃತ್ತ ಸೈನಿಕ ಚಂದಪ್ಪ ಗೌಡ ಮೊಗ್ರು ಆರೋಪ

0

ಪತ್ರಿಕಾ ಗೋಷ್ಠಿ
ಬೆಳ್ತಂಗಡಿ :ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಶತ್ರುಗಳ ಗುಂಡು ತಗಲಿ ವಿಕಲ ಚೇತನರಾದ ಬಳಿಕ ನಿವೃತ್ತರಾದ ಚಂದಪ್ಪ ಗೌಡ ಮೊಗ್ರು ರವರು ನಿವೃತ್ತ ಸೈನಿಕರಿಗಾಗಿ ಸರಕಾರದ ಜಾಗಕ್ಕೆ ಕಳೆದ 20 ವರ್ಷದಿಂದ ಹೋರಾಟ ಮಾಡಿದರು ಅಧಿಕಾರಿಗಳು ಗಣ್ಯ ಪ್ರಭಾವಿ ವ್ಯಕ್ತಿಗಳ ಪ್ರಭಾವದಿಂದ ಜಾಗ ಮಂಜೂರು ಮಾಡಲಿಲ್ಲ ಎಂದು ಚಂದಪ್ಪ ಗೌಡ ಆರೋಪಿಸಿದರು. ಅವರು ಮಾ.23 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ನಿವೃತ್ತ ಆದ 2003 ರಲ್ಲಿ ಕಾಣಿಯೂರು ಗ್ರಾಮದ ಪದ್ಮುಂಜ 13 ಎಕ್ರೆ ಜಾಗಕ್ಕೆ ಅರ್ಜಿ ಸಲ್ಲಿಸಿದ್ದು, ಸರಕಾರದ ನಿಯಮ ಅನುಸಾರ 7.50 ಎಕ್ರೆ ಸರಕಾರಿ ಜಾಗ ಮಂಜೂರು ಆಗಿತ್ತು. ಆದರೆ ಅಲ್ಲಿಯ ಕೊಲ್ಲಾಜೆ ನಾರಾಯಣ ಭಟ್ ಅವರ ಕುಮ್ಕಿ ಜಾಗ ವೆಂದು ಆಕ್ಷೇಪ ಸಲ್ಲಿಸಿ 2004 ರಲ್ಲಿ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ನಂತರ 2007 ರಲ್ಲಿ ಹೈಕೋರ್ಟ್ ನಲ್ಲಿ ನನ್ನ ಹೆಸರಿಗೆ 7ಎಕ್ರೆ ಜಾಗ ಮಂಜೂರು ಆಗಿರುತ್ತದೆ, ಆದರೆ ಕೊಲ್ಲಾಜೆಯ ಗಣ್ಯ ಕುಟುಂಬದವರ ಪ್ರಭಾವದಿಂದ ಗ್ರಾಮಕರಣಿಕರು, ಕಂದಾಯ ಅಧಿಕಾರಿಗಳು, ಮಂಜೂರು ಮಾಡಲು ಆಕ್ಷೇಪ ಮಾಡುತ್ತಿದ್ದಾರೆ.18 ವರ್ಷಗಳಿಂದ ಈ ಜಾಗಕ್ಕಾಗಿ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಅಧಿಕಾರಿಗಳು ಸೂಕ್ತ ತನಿಖೆ ಮಾಡಿ ನಿವೃತ್ತ ಸೈನಿಕನಿಗೆ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here