ಕಲ್ಲೇರಿ: ಕರಾಯದಲ್ಲಿಂದು ಸಂಭ್ರಮ ಸಡಗರ, ಭಕ್ತರು ಭಕ್ತಿಯಿಂದ ಆ ಕೊಡಿಮರಕ್ಕಾಗಿ ಕಾಯುತ್ತಿದ್ದರು. ಕೆಮ್ಮುಂಜೆ ನಾಗೇಶ್ ತಂತ್ರಿಗಳ ಮಾರ್ಗದರ್ಶನದಂತೆ ಕುರಿಯಾಡಿ ಕಣಿಯೂರು ಬಾಬು ಗೌಡರವರ ಮನೆಯ ಜಾಗದಿಂದ ಮಹಾಲಿಂಗೇಶ್ವರನ ಸನ್ನಿಧಿಗೆ ಕೊಡಿಮರವನ್ನು ಬೃಹತ್ ಶೋಭಾಯಾತ್ರೆಯಲ್ಲಿ ತರಲಾಯಿತು.
ಕೊಡಿಮರ (ಧ್ವಜಸ್ತಂಭ)ದ ಮೆರವಣಿಗೆ ಬೃಹತ್ ಭಕ್ತ ಸಮೂಹ ಕಣಿಯೂರಿನಿಂದ ಕರಾಯದ ಮಹಾಲಿಂಗೇಶ್ವರನ ಸನ್ನಿಧಿವರೆಗೆ ನಡೆದ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾದರು. ಮೆರವಣಿಗೆ ಹಾದು ಬರುವ ಪ್ರತಿ ಪೇಟೆಯಲ್ಲೂ ಕೂಡ ಭಕ್ತವೃಂದ ಬೃಹತ್ ಕೊಡಿಮರವನ್ನು ನೋಡಿ ಕೈ ಮುಗಿಯುತ್ತಿದ್ದರು.
ಕ್ಷೇತ್ರದ ರಾಜಗೋಪುರಕ್ಕೆ ಶಿಲಾನ್ಯಾಸ
ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಬೃಹತ್ ರಾಜಗೋಪುರದ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದ್ರು. ನಿರ್ಮಲ ಡಿಸೈನ್ ಕನ್ಸಸ್ಟಕ್ಷನ್ ಇಂಜಿನಿಯರ್ ಸಾಮ್ರಾಟ್ ಕರ್ಕೇರರಿಗೆ ರಾಜಗೋಪುರ ನಿರ್ಮಾಣದ ಜವಾಬ್ಧಾರಿ ನೀಡಲಾಯಿತು. ಕಾರ್ಯಾಧ್ಯಕ್ಷರಾದ ಗೌತಮ್ ಭಾವಂತಬೆಟ್ಟು, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಅತುಲ್ ಕುಮಾರ್ ಕೆ ಎನ್, ಧಾರ್ಮಿಕ ಪರಿಷತ್ ಸದಸ್ಯರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಇತರ ಪ್ರಮುಖರು ಭಾಗಿಯಾದರು. ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಭಾಗಿಯಾದರು.