ಉಜಿರೆ : ಉಜಿರೆಯ ಅಜ್ಜರಕಾಡು ಮೈದಾನದಲ್ಲಿ ತಾಲೂಕಿನ ಸಿರೋಮಲಬಾರ್ ಕ್ರೈಸ್ತ ಸಮುದಾಯದ ಕ್ರೀಡಾಕೂಟ ಕ್ರಿಸ್ಪೋ 2023 ಮಾ.11 ರಂದು
ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿಗೆ ಶಾಸಕ ಹರೀಶ್ ಪೂಂಜ ಅವರು ವಹಿಸಿ ಮಾತನಾಡುತ್ತಾ ಬೆಳ್ತಂಗಡಿ ತಾಲೂಕಿನ ಎಲ್ಲ ಜನರನ್ನೂ ಒಳಗೊಂಡು ಸಮಗ್ರವಾದ ಅಭಿವೃದ್ದಿಯನ್ನು ಸಾಧಿಸಬೇಕು ಎಂಬ ಉದ್ದೇಶದೊಂದಿಗೆ ಕಳೆದ ನಾಲ್ಕುವರೆ ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇನೆ.
ನವ ಬೆಳ್ತಂಗಡಿಯನ್ನು ಕಟ್ಟುವಲ್ಲಿವಸಾಕಷ್ಟು ಮುಂದುವರಿದಿದ್ದೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಗಳನ್ನು ಮಾಡಲು ಎಲ್ಲರೂ ಶಕ್ತಿ ತುಂಬುವಂತೆ ಅವರು ವಿನಂತಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ ಜೋಸ್ ವಲಿಯಪರಂಬಿಲ್ ವಹಿಸಿ ಶುಭ ಹಾರೈಸಿದರು.
ಕೆ.ಎಸ್.ಎ.ಸಿ.ಎ ನಿರ್ದೇಶಕ ಫಾ ಶಾಜಿ ಮ್ಯಾಥ್ಯೂ ಮಾತನಾಡಿ ಶಾಸಕರು ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘಟಕರ ವತಿಯಿಂದ ಶಾಸಕರನ್ನು ಗೌರವಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸ್ ಲರ್ ಫಾ. ಲಾರೆನ್ಸ್, ಫಾ ತೋಮಸ್, ಫಾ ವರ್ಗೀಸ್, ಫಾ ಜೋಸಫ್, ಫಾ ದಿಲೀಪ್, ಕ್ರಿಸ್ಪೋ ಸಂಘಟಕ ಸೆಬಾಸ್ಟಿಯನ್ ಪಿ.ಸಿ ಹಾಗೂ ಇತರರು ಉಪಸ್ಥಿತರಿದ್ದರು.
ಸೆಬಾಸ್ಟಿಯನ್ ಪಿ.ಸಿ ಸ್ವಾಗತಿಸಿದರು. ಅಬ್ರಹಾಂ ಜೇಮ್ಸ್ ವಂದಿಸಿದರು. ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಕ್ರೀಡಾಪಟುಗಳು ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.