


ಧರ್ಮಸ್ಥಳ : ಧರ್ಮಸ್ಥಳದ ನಿವಾಸಿ ನಿವೃತ್ತ ಮುಖ್ಯ ಅರ್ಚಕ ಕೆ. ಶ್ರೀನಿವಾಸ ಉಪಾಧ್ಯಾಯ ಕೆ. (94 ವರ್ಷ ) ರವರು ಫೆ.17 ರಂದು ಸ್ವಗೃಹದಲ್ಲಿ ನಿಧನರಾದರು.
ಅವರು ಪತ್ನಿ, ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ. ಅವರು 58 ವರ್ಷಗಳ ಕಾಲ ಧರ್ಮಸ್ಥಳದ ಮಂಜುನಾಥ ದೇವಸ್ಥಾನದಲ್ಲಿ ದೇವಳದ ವಿವಿಧ ವಿಭಾಗದಲ್ಲಿ ದುಡಿದು ಮಂಜುನಾಥ ದೇವರ ಮುಖ್ಯ ಅರ್ಚಕರಾಗಿ ನಿವೃತ್ತಿ ಹೊಂದಿದ್ದರು.